ಬ್ಯಾಂಕ್ ಲಾಕರ್​ನಲ್ಲಿಟ್ಟಿದ್ದ ಚಿನ್ನಭರಣ ಮಾಯ, ಸಿಬ್ಬಂದಿ ವಿರುದ್ಧ ಬಿತ್ತು FIR

ಬೆಂಗಳೂರು: ಮನೆಯಲ್ಲಿ ಹಣ ಒಡವೆ ಇಟ್ರೆ ಕಳ್ಳರ ಕಾಟ ಎಂದು ಅದೆಷ್ಟೋ ಜನ ತಮ್ಮ ಹಣ ಒಡವೆಯನ್ನ ಸೇಫ್ ಆಗಿ ಇಡಲು ಬ್ಯಾಂಕ್​ಗಳ ಮೊರೆ ಹೋಗುವುದು ಸಾಮಾನ್ಯ. ಆದರೆ ಆ ಬ್ಯಾಂಕ್ ಲಾಕರ್​ಗಳು ಎಷ್ಟು ಸೇಫ್ ಎಂಬ ಪ್ರಶ್ನೆ ಕಾಡುತ್ತೆ.

ಬ್ಯಾಂಕ್ ಲಾಕರ್ ನಲ್ಲಿದ್ದ 85 ಲಕ್ಷ ಮೌಲ್ಯದ ಚಿನ್ನಭರಣ ಕಳವಾಗಿರುವ ಘಟನೆ ಬೆಂಗಳೂರಿನ ಜಯನಗರ ಬ್ಯಾಂಕ್ ಆಫ್ ಬರೋಡ ಬ್ಯಾಂಕ್​ನಲ್ಲಿ ನಡೆದಿದೆ. ಈ ಸಂಬಂಧ ಬ್ಯಾಂಕ್ ಸಿಬ್ಬಂದಿ ವಿರುದ್ಧ FIR ದಾಖಲಾಗಿದೆ. ಶಿವಪ್ರಸಾದ್ ಎಂಬುವವರು ಕಳೆದ ಫೆಬ್ರವರಿಯಲ್ಲಿ ತಮ್ಮ ಬ್ಯಾಂಕ್ ಲಾಕರ್ ನಂ 24 ರಲ್ಲಿ 1.73 ಕೆಜಿ ಚಿನ್ನಭರಣ ಇಟ್ಟಿದ್ರು. ಜುಲೈ 22 ರಂದು ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ ಚಿನ್ನಭರಣ ಮಾಯಾವಾಗಿದೆ. ಗಾಬರಿಯಾದ ಶಿವಪ್ರಸಾದ್ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಸಿಸಿ ಕ್ಯಾಮೆರಾ ಆಧಾರಿಸಿ ಜಯನಗರ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Related Tags:

Related Posts :

Category:

error: Content is protected !!