ರಾಜ್ಯದಲ್ಲಿ ಕೊರೊನಾ ನಾಗಾಲೋಟ, ಹೊಸದಾಗಿ ನೂರಾರು ಕೇಸ್

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 105 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,710ಕ್ಕೆ ಏರಿಕೆಯಾಗಿದೆ. 1,710 ಸೋಂಕಿತರ ಪೈಕಿ 588ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿಗೆ 41 ಜನರು ಬಲಿಯಾಗಿದ್ದಾರೆ ಎಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಒಂದೇ ದಿನ 51 ಪ್ರಕರಣಗಳು ಪತ್ತೆಯಾಗಿವೆ.ತುಮಕೂರು 8, ಬೆಂಗಳೂರು ಗ್ರಾಮಾಂತರ 4, ಹಾವೇರಿ 3, ಬೆಂಗಳೂರು 5, ಬೀದರ್ 6, ಧಾರವಾಡ 2, ಮಂಡ್ಯ 3, ಹಾಸನ 14, ಚಿತ್ರದುರ್ಗ 1, ಚಿಕ್ಕಮಗಳೂರು 5, ಬಾಗಲಕೋಟೆ 1, ದಕ್ಷಿಣ ಕನ್ನಡ 1 ಕೇಸ್ ಪತ್ತೆಯಾಗಿದೆ.

Related Posts :

Category:

error: Content is protected !!