ಕೊರೊನಾ ಗೆದ್ದ ಒಂದೇ ಕುಟುಂಬದ 11 ಮಂದಿ, ಎಲ್ಲಿ?

ಬೀದರ್: ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟಾಗಿನಿಂದ ಅದರ ಬಗ್ಗೆ ಸಮಾಜದಲ್ಲಿ ಬಹಳಷ್ಟು ತಪ್ಪು ತಿಳುವಳಿಕೆ ಬೇರೂರಿದೆ. ಸೋಂಕು ಅಂಟಿದರೆ ಭಯ ಪಡುವುದಾಗಲಿ, ಮುಜುಗುರಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸೂಕ್ತ ಉಪಚಾರ, ವೈದ್ಯರ ಸಲಹೆಯ ಜೊತೆಗೆ ಆತ್ಮಸ್ಥೈರ್ಯವೇ ಕೊರೊನಾ ವಿರುದ್ಧ ಹೋರಾಡಲು ಬೇಕಾದ ಪ್ರಮುಖ ಅಸ್ತ್ರಗಳು.

ಅದಕ್ಕೆ ಉತ್ತಮ ನಿದರ್ಶನ ನಗರದ ಗೋವಿಂದ ಕಾಲೋನಿಯ ಶಿವಪುತ್ರ ವೈದ್ಯ ಕುಟುಂಬ‌. ಈ ಕುಟುಂಬದ 11 ಸದಸ್ಯರಿಗೆ ಒಮ್ಮೆಲೆ ಕೊವಿಡ್ ಸೋಂಕು ಅಂಟಿತ್ತು. ಅದೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೆಯೇ. ಸೋಂಕು ದೃಢಪಡುತ್ತಲೇ ಇವರೆಲ್ಲರೂ ಹೋಮ್ ಐಸೋಲೆಷನ್​ನಲ್ಲಿ ಚಿಕಿತ್ಸೆ ಪಡೆದು, ಕೇವಲ ಐದೇ ದಿನದಲ್ಲಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಈ ಕುಟುಂಬದ ವೀರಪ್ಪ ವೈದ್ಯ ವಯೋಸಹಜ ಖಾಯಿಲೆಯಿಂದ ಜುಲೈ 10ರಂದು ಮೃತ್ತಪಟ್ಟಿದ್ದರು. ಇವರು ಸಾವಿನ ನಂತರ ಕೊಕೋವಿಡ್ ಟೆಸ್ಟ್ ಮಾಡಿಸಿದ್ದಾಗ ಇವರ ವರದಿ ನೆಗೆಟಿವ್ ಬಂದಿತ್ತು. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಕುಟುಂಬದ 20 ಜನರು ಕೋವಿಡ್ ಟೆಸ್ಟ್ ಮಾಡಿಸಿದಾಗ 11 ಜನರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು.

ಧೃತಿಗೆಡದೆ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕುಟುಂಬ
ಇದರಲ್ಲಿ ಮಕ್ಕಳಿಂದ ಹಿಡಿದು ವೃದ್ಧರೂ ಸಹ ಸೋಂಕಿಗೆ ಬಲಿಯಾಗಿದ್ದರು‌. ವೈದ್ಯ ಕುಟುಂಬದ 12 ವರ್ಷದ ಬಾಲಕನಿಂದ ಹಿಡಿದು 79 ವರ್ಷದ ವೃದ್ಧೆಗೂ ಸಹ ಕೊರೊನಾ ಸೋಂಕು ಅಂಟಿತ್ತು. ಆದರೆ, ಇದರಿಂದ ಈ ಕುಟುಂಬದವರು ಧೃತಿಗೆಡದೆ ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. 16 ವರ್ಷದ ಬಾಲಕರಿಂದ ಹಿಡಿದು 79 ವರ್ಷದ ವೃದ್ಧೆಯವರೆಗೂ ಎಲ್ಲಾ ಕುಟುಂಬಸ್ಥರಿಗೆ ಸೋಂಕು ತಗಲಿತ್ತು.

ಈ 11 ಜನರಲ್ಲಿ ಯಾರಿಗೂ ಕೂಡಾ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಎಲ್ಲರೂ asymptomatic ಇದ್ದುದ್ದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಆದೇಶದ ಮೇರೆಗೆ ಮೂವರು ಮಕ್ಕಳು ಸೇರಿದಂತೆ ಎಲ್ಲಾ 11 ಜನರು ಸಹ ಮನೆಯಲ್ಲಿಯೇ ಉಳಿದು ಆರ್ಯುವೇದದ ಪದ್ಧತಿಯಂತೆ ಉಪಚಾರ ಪಡೆದಿದ್ದಾರೆ. ಅಲೋಪಥಿಕ್ ಮಾತ್ರೆಯ ಜೊತೆಯಲ್ಲಿ ಆರ್ಯುವೇದದ ಕಷಾಯ, ನಿತ್ಯ ಬಿಸಿನೀರು ಸೇವನೆ, ಬಿಸಿಯೂಟ ಸೇವನೆ ಇತ್ಯಾದಿ ಸಹಜ ಚಿಕಿತ್ಸೆ ಪಡೆದಿದ್ದಾರೆ.

ಜುಲೈ 20ರಂದು ಕೊರೊನಾ ಪಾಸಿಟಿವ್ ಬಂದಿದ್ದ ಇವರ ವರದಿ, ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಐದೇ ದಿನದಲ್ಲಿ ಅಂದರೆ ಜುಲೈ 25ರಂದು ನೆಗೆಟಿವ್ ಬಂದಿದೆ. ಕೊರೊನಾ ಬಂದರೆ ಹೆದರುವ ಅಗತ್ಯವಿಲ್ಲ. ಧೈರ್ಯವೊಂದೇ ಕೊರೊನಾ ಹಿಮ್ಮೆಟ್ಟಿಸಲು ಇರುವ ಅಸ್ತ್ರ ಎನ್ನುತದೆ ಈ ಕೊರೊನಾ ಗೆದ್ದ ತುಂಬು ಕುಟುಂಬ. ಸುರೇಶ್ ನಾಯಕ್

Related Tags:

Related Posts :

Category: