ಕೊರೊನಾಗೆ ಸೆಡ್ಡು ಹೊಡೆದ 110 ವರ್ಷದ ಅಜ್ಜಿ, ಎಲ್ಲಿ?

ಚಿತ್ರದುರ್ಗ‌: ಕೊರೊನಾ ಮಹಾಮಾರಿಗೆ ಹೆಚ್ಚಾಗಿ ವಯಸ್ಕರು ಹಾಗೂ ವೃದ್ಧರು ಬಲಿಯಾಗುತ್ತಿದ್ದು, ಅಚ್ಚರಿಯೆಂಬಂತೆ 110 ವರ್ಷದ ವೃದ್ಧೆಯೊಬ್ಬರು ಕೊರೊನಾ ಸೋಂಕನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಜುಲೈ 28ರಂದು ಕೊರೊನಾ ಸೋಂಕಿತ 110 ವರ್ಷದ ವೃದ್ಧೆಯೊಬ್ಬರು ಚಿಕಿತ್ಸೆಗೆಂದು ಚಿತ್ರದುರ್ಗ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ವೃದ್ಧೆ ಕೇವಲ ನಾಲ್ಕೇ ನಾಲ್ಕು ದಿನದಲ್ಲಿ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸರ್ಜನ್ ಡಾಕ್ಟರ್ ಬಸವರಾಜ್ ತಿಳಿಸಿದ್ದಾರೆ.

ಚಿತ್ರದುರ್ಗ‌ ನಗರದಲ್ಲಿ ಪೊಲೀಸ್ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಮ್ಮಗನ ಜೊತೆ ವೃದ್ಧೆ ವಾಸವಿದ್ದಾರೆ ಎನ್ನಲಾಗಿದೆ.

Related Tags:

Related Posts :

Category:

error: Content is protected !!