ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗಂಡು ಮರಿಗೆ ಜನ್ಮ ನೀಡಿದ ರೂಪ

ಬೆಂಗಳೂರು:ಕೊರೊನಾ ಹಾವಳಿ ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ಈ ಮಾಯಾಜಾಲದಿಂದ ತಪ್ಪಿಸಿಕೊಳ್ಳಲು ಆಡಳಿತ ಸರ್ಕಾರ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ.

ಜೊತೆಗೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಿಗೆ ಲಾಕ್​ಡೌನ್ ಹೇರಿದ್ದ ಸರ್ಕಾರ ಇತ್ತೀಚೆಗೆ ಹಂತಹಂತವಾಗಿ ಲಾಕ್​ಡೌನ್ ಸಡಿಲಗೊಳಿಸುತ್ತಿದೆ. ಇಂತಹ ಸಮಯದಲ್ಲಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಿಂದ ಖುಷಿಯ ವಿಚಾರವೊಂದು ಹೊರಬಿದ್ದಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರೂಪಾ ಎಂಬ 12 ವರ್ಷದ ಆನೆ ನಿನ್ನೆ ಗಂಡು ಮರಿಗೆ ಜನ್ಮ ನೀಡಿದ್ದು. ತಾಯಿ ಆನೆ ಮತ್ತು ಮರಿ ಆನೆ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ತಿಳಿಸಿದ್ದಾರೆ.ಇದು ರೂಪಾ ಜನನ ನೀಡುತ್ತಿರುವ ಎರಡನೇ ಮರಿಯಾಗಿದ್ದು, ಈ ಹಿಂದೆ ಅಂದರೆ 2016 ರಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿತ್ತು.

Related Tags:

Related Posts :

Category:

error: Content is protected !!