ಕರುನಾಡಿಗೆ ಕೊರೊನಾಘಾತ: ಬೆಂಗಳೂರಿನಲ್ಲಿ 783 ಜನಕ್ಕೆ ಅಟ್ಯಾಕ್, ರಾಜ್ಯದಲ್ಲಿ 16 ಸಾವು

ಬೆಂಗಳೂರು: ಹೆಮ್ಮಾರಿ ಕೊರೊನಾ ಕರುನಾಡಿನಲ್ಲಿ ರುದ್ರ ನರ್ತನ ಮಾಡೋಕೆ ಶರುವಾಗಿದೆ. ಮಹಾಮಾರಿ ಆರ್ಭಟಕ್ಕೆ ಇಡೀ ಕರುನಾಡು ಬೆಚ್ಚಿ ಬಿದ್ದಿದೆ. ನಿನ್ನೆ ಸಾವಿರ ಸನಿಹಕ್ಕೆ ಬಂದು ನಿಂತಿದ್ದ ಕೊರೊನಾ, ಇಂದು ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ರಾಜಧಾನಿ ಬೆಂಗಳೂರು ಸಹ ನಡುಗಿ ಹೋಗಿದೆ.

ರಾಜ್ಯದಲ್ಲಿ 1,267 ಜನರಿಗೆ ಕೊರೊನಾ ಸೋಂಕು:
ರಾಜ್ಯದಲ್ಲಿ ಇಂದು ಹೊಸದಾಗಿ 1267ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13,190ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ನಾಲ್ವರ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾದಿಂದ ಈವರೆಗೆ 88 ಜನರ ಸಾವಿಗೀಡಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಒಂದೇ ದಿನ 783 ಜನರಿಗೆ ಸೋಂಕು, ದಕ್ಷಿಣ ಕನ್ನಡ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಧಾರವಾಡ 18, ಮೈಸೂರು 18, ಬಾಗಲಕೋಟೆ 17, ಉತ್ತರ ಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್ 7, ಚಿತ್ರದುರ್ಗ 7, ರಾಯಚೂರು 6, ಮಂಡ್ಯ 6, ದಾವಣಗೆರೆ 6, ವಿಜಯಪುರ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ 3, ಕೊಪ್ಪಳ 3, ಚಿಕ್ಕಮಗಳೂರು 3, ಕೊಡಗು 3, ತುಮಕೂರು 2, ಯಾದಗಿರಿ ಜಿಲ್ಲೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಇಂದು 16 ಮಂದಿ ಸಾವು:
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 16 ಜನರು ಮೃತಪಟ್ಟಿದ್ದು, ಕರ್ನಾಟಕದಲ್ಲಿ ಈವರೆಗೆ ಕೊರೊನಾದಿಂದ 207 ಜನರು ಮೃತಪಟ್ಟಿದ್ದಾರೆ. 13,190 ಸೋಂಕಿತರ ಪೈಕಿ 7,507 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 5472 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more