ಕಮ್ಮಿಯಾಗುತ್ತಿಲ್ಲ ಸೋಂಕಿನ ಆರ್ಭಟ, ಇಂದು ಮತ್ತೆ 9,000 ಕ್ಕಿಂತ ಜಾಸ್ತಿ ಪ್ರಕರಣಗಳು

  • TV9 Web Team
  • Published On - 20:04 PM, 10 Sep 2020

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಇಂದು 129 ಜನ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. 9,217 ಹೊಸ ಪಾಸಿಟಿವ್ ಪ್ರಕರಣಗಳು ಗುರುವಾರದಂದು ಬೆಳಕಿಗೆ ಬಂದಿದ್ದು ಸೋಂಕಿತರ ಒಟ್ಟು ಸಂಖ್ಯೆ 4,30,947ಕ್ಕೇರಿಕೆ. ಮಹಾಮಾರಿಗೆ ಇದುವರೆಗೆ ಬಲಿಯಾದವರ ಸಂಖ್ಯೆ 6,937 ತಲುಪಿದೆ.

ಸೋಂಕಿತರ ಪೈಕಿ 3,22,454 ಜನ ಗುಣಮುಖರಾಗಿ ಮನೆಗಳಿಗೆ ವಾಪಸ್ಸಾಗಿದ್ದಾರೆ, ಮಿಕ್ಕಿದ 1,01,537 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊವಿಡ್-19 ಸೋಂಕಿಗೆ 33 ಜನ ಸಾವನ್ನಪ್ಪಿದ್ದು, ಇವತ್ತಿನವರೆಗಿನ ಮೃತರ ಸಂಖ್ಯೆ 2,340 ಮುಟ್ಟಿದೆ. ಕಳೆದ 24 ಗಂಟೆಗಳಲ್ಲಿ 3,161 ಜನ ಹೊಸದಾಗಿ ಸೋಂಕಿತರ ಪಟ್ಟಿಗೆ ಸೇರಿದ್ದು ಈ ಸಂಖ್ಯೆಯು 1,60,205ಕ್ಕೇರಿದೆ.

ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 2,340 ಜನ ಕೊವಿಡ್-19ಗೆ ಬಲಿಯಾಗಿದ್ದಾರೆ. ಸೋಂಕಿತರಲ್ಲಿ 1,14,208 ಜನ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ, ಉಳಿದ 43,656 ಸೋಂಕಿತರಿಗೆ ಕೊವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.