ರಾಜ್ಯದಲ್ಲಿ 138 ಮಂದಿಗೆ ವಕ್ಕರಿಸಿದ ಕೊರೊನಾ, ತಾಜಾ ಮಾಹಿತಿ ಇಲ್ಲಿದೆ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 138 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,743 ಕ್ಕೆ ಏರಿಕೆಯಾಗಿದೆ. ಬೆಳಗಿನ ವರದಿಯಲ್ಲಿ 105 ಮಂದಿಗೆ ಕೊರೊನಾ ಸೋಂಕು ತಗುಲಿತ್ತ. ಇದೀಗ ಸಂಜೆಯ ಹೆಲ್ತ್​ ಬುಲೆಟಿನ್​ನಲ್ಲಿ ಹೊಸದಾಗಿ 33 ಮಂದಿಗೆ ಕೊರೊನಾ ವಕ್ಕರಿಸಿದೆ.

ಚಿಕ್ಕಬಳ್ಳಾಪುರ 47, ಹಾಸನ 14, ರಾಯಚೂರು 10, ಬೀದರ್ 9, ತುಮಕೂರು 8, ಮಂಡ್ಯ 8, ವಿಜಯಪುರ 7, ಚಿಕ್ಕಮಗಳೂರು 5, ಬೆಂಗಳೂರು 5, ಬೆಂಗಳೂರು ಗ್ರಾಮಾಂತರ 5, ದಾವಣಗೆರೆ, ಉಡುಪಿ, ಹಾವೇರಿ ಜಿಲ್ಲೆಯಲ್ಲಿ ತಲಾ 3 ಕೇಸ್, ಧಾರವಾಡ, ಶಿವಮೊಗ್ಗ, ಯಾದಗಿರಿಯಲ್ಲಿ ತಲಾ 2 ಕೇಸ್, ಬಾಗಲಕೋಟೆ, ಚಿತ್ರದುರ್ಗ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

1,743 ಸೋಂಕಿತರ ಪೈಕಿ 597ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಈವರೆಗೆ 41 ಜನರು ಬಲಿಯಾಗಿದ್ದು, ಸೋಂಕಿತ 1,104 ಜನರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Related Posts :

Category:

error: Content is protected !!