ಅಭಿಷೇಕ್ ಬಚ್ಚನ್ ಜತೆಗಿನ ‘ಗುರು’ ನೆನಪು ಹಂಚಿಕೊಂಡ ಐಶ್ವರ್ಯಾ ರೈ

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಒಟ್ಟು 8 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸ್ಟಾರ್ ಜೋಡಿ ಒಟ್ಟಿಗೆ ನಟಿಸಿದ ಗುರು ಸಿನಿಮಾ ಬಿಡುಗಡೆಯಾಗಿ 14 ವರ್ಷ ಆದ ಸಂಭ್ರಮವನ್ನು ಐಶ್ವರ್ಯಾ ರೈ ಬಚ್ಚನ್ ಹಂಚಿಕೊಂಡಿದ್ದಾರೆ.

  • TV9 Web Team
  • Published On - 22:10 PM, 13 Jan 2021
AishwaryaRai Abhishek Bachchan
ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್

ಮುಂಬೈ: 1994ರ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನೂ ಸಕ್ರಿಯರಲ್ಲ. ಆದರೆ, ಆಗಾಗ ಚಿಕ್ಕಚಿಕ್ಕ ಕುತೂಹಲಕರ ವಿಷಯಗಳನ್ನು, ಚಿತ್ರಗಳನ್ನು ಹರಿಬಿಡುತ್ತ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ ಅಭಿಷೇಕ್ ಬಚ್ಚನ್ ಮಡದಿ. ಈಗ ಅವರು ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ಚಿತ್ರಕ್ಕಂತೂ ತುಂಬಾ ಮಹತ್ವವಿದೆ. ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಒಟ್ಟು 8 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸ್ಟಾರ್ ಜೋಡಿ ಒಟ್ಟಿಗೆ ನಟಿಸಿದ ಗುರು ಸಿನಿಮಾ ಬಿಡುಗಡೆಯಾಗಿ 14 ವರ್ಷ ಆದ ಸಂಭ್ರಮವನ್ನು ಐಶ್ವರ್ಯಾ ರೈ ಬಚ್ಚನ್ ಹಂಚಿಕೊಂಡಿದ್ದಾರೆ.

ಗುರು ಸಿನಿಮಾ ಚಿತ್ರ ಮಂದಿರಗಳಿಗೆ ಅಪ್ಪಳಿಸಿದಾಗ ತಮ್ಮ ಸಹನಟ ಅಭಿಷೇಕ್ ಬಚ್ಚನ್ ಜತೆ ವಿಶ್ವ ಸುಂದರಿ ಚಿತ್ರ ಮಂದಿರವೊಂದಕ್ಕೆ ಆಗಮಿಸಿದ್ದರು. ಗುರು ನಿರ್ದೇಶಕ ಮಣಿ ರತ್ನಂ ಸಹ ಅವರಿಗೆ ಜತೆಯಾಗಿದ್ದರು. ಅಂದಿನ ಚಿತ್ರಗಳನ್ನು ಹಂಚಿಕೊಂಡಿರುವ ಐಶ್ವರ್ಯಾ ರೈ, ‘ಇಂದಿಗೆ 14 ವರ್ಷ..ಕೊನೆತನಕವೂ ಗುರು..’ ಎಂದು ಬರೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಸಹ ಗುರು ಸಿನಿಮಾಕ್ಕೆ 14 ವರ್ಷದ ಸಂಭ್ರಮ ಹಂಚಿಕೊಂಡಿದ್ದಾರೆ.

ಬಿಗ್ ಬಿ ಯಾವತ್ತಿಗೂ ಬ್ಯುಸಿ ಬೀ!