ಖಾಕಿ ಪಡೆಗೆ ಕೊರೊನಾ ಕಂಟಕ, ಪೊಲೀಸರಿಗೆ ಕೊವಿಡ್ ಟೆಸ್ಟ್ ಕಂಪಲ್ಸರಿ

ಬೆಂಗಳೂರು: ದೇಶದಲ್ಲಿ ಕೊರೊನಾ ಕರಾಳತೆ ಮಿತಿ ಮೀರುತ್ತಿದೆ. ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಹೆಚ್ಚು ಮಾಡುತ್ತಿದೆ. ಇನ್ನು ಕೊವಿಡ್ ವಿರುದ್ಧ ಹೋರಾಡಲು ತೊಡೆ ತಟ್ಟಿ ನಿಂತ ಖಾಕಿ ಪಡೆಗೆ ಕೊರೊನಾ ಬೆನ್ನು ಬಿಡದೆ ಕಾಡುತ್ತಿದೆ. ನಗರದಲ್ಲಿ 140ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದೆ.

ಪ್ರತಿ ದಿನ ಮೂರು ಅಥವಾ ನಾಲ್ಕು ಪೊಲೀಸ್ ಠಾಣೆಗಳು ಸೀಲ್​ಡೌನ್ ಆಗುತ್ತಿವೆ. ಬೆಂಗಳೂರಿನಲ್ಲಿ ಈವರೆಗೆ 31 ಪೊಲೀಸ್ ಠಾಣೆಗಳು ಸೀಲ್‌ಡೌನ್ ಆಗಿವೆ. ಸೋಂಕಿತರ ಸಂಪರ್ಕದಲ್ಲಿದ್ದ 890 ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ. ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಪೊಲೀಸರಿಗೆ ಡಿಜಿ & ಐಜಿಪಿ ಪ್ರವೀಣ್ ಸೂದ್ ಸೂಚಿಸಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more