16 ಎಕರೆ ವಿಶಾಲವಾದ ‘ಮೈದಾನ’ ಪೀಸ್ ಪೀಸ್​ ಮಾಡಿಬಿಟ್ಟರು, ಯಾಕೆ?

ಮುಂಬೈ: 16 ಎಕರೆ ಜಾಗದಲ್ಲಿ ಅಪಾರ ಹಣ ಖರ್ಚು ಮಾಡಿ ವಿಶಾಲವಾಗಿ ನಿರ್ಮಿಸಿದ್ದ ಸೆಟ್ ಅನ್ನು ಕೆಡವಲಾಗಿದೆ. ಅಜಯ್ ದೇವಗನ್ ಅಭಿನಯದ ಮೈದಾನ್ ಚಿತ್ರದ ಚಿತ್ರೀಕರಣಕ್ಕೆ ಮುಂಬೈ ಬಳಿ 16 ಎಕರೆ ಜಾಗದಲ್ಲಿ ಎಲ್ಲಾ ಮೂಲಸೌಕರ್ಯಗಳನ್ನು ಒಳಗೊಂಡಂತೆ ಬೃಹತ್ ಹೊರಾಂಗಣ ಸೆಟ್ ಅನ್ನು ನಿರ್ಮಿಸಲಾಗಿತ್ತು. ಆದರೆ ಕೊರೊನಾ ಲಾಕ್​ಡೌನ್ ಹಾಗೂ ಮುಂಬರುವ ಮಾನ್ಸೂನ್​ನಿಂದಾಗಿ ಸೆಟ್​ನ ತೆರವುಗೊಳಿಸಲಾಗಿದೆ.

ಸೆಟ್ ಹಾಕಿದ ನಂತರ ಮೈದಾನ್ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಇದರ ನಡುವೇ ಕೊರೊನಾ ಭಾರತಕ್ಕೆ ವಕ್ಕರಿಸಿ ಸಿನಿಮಾದ ಸೆಟ್​ನ ಕೆಡವಲಾಗಿದೆ.  ಜೊತೆಗೆ ಮಳೆಯ ಭಯವೂ ಕಾಡಿದೆ. ಸೆಟ್​ನ ಮತ್ತೆ ನಿರ್ಮಿಸಲು 2 ತಿಂಗಳಾದ್ರು ಬೇಕಾಗುತ್ತೆ. ಸೆಪ್ಟೆಂಬರ್‌ನಲ್ಲಿ ಇದು ಪೂರ್ಣಗೊಳ್ಳಬಹುದು. ಹಾಗೂ ಸಿನಿಮಾದ ಶೂಟಿಂಗ್ ನವೆಂಬರ್ ನಂತರ ಪ್ರಾರಂಭವಾಗಬಹುದು ಎಂದು ಚಿತ್ರದ ನಿರ್ಮಾಪಕ ಬೋನಿ ಕಪೂರ್ ಹೇಳಿದ್ದಾರೆ.

ಜೊತೆಗೆ ಸೆಟ್ ತೆರವುಗೊಳಿಸಿದ್ದರಿಂದ ನಮಗೆ ಭಾರಿ ನಷ್ಟವಾಗಿದೆ. ಆದರೆ ಅದೃಷ್ಟವಶಾತ್ ಎಲ್ಲಾ ಒಳಾಂಗಣ ಮತ್ತು ಕೆಲವು ಹೊರಾಂಗಣ, ತರಬೇತಿ ಭಾಗಗಳನ್ನು ಲಕ್ನೋ ಮತ್ತು ಕೋಲ್ಕತ್ತಾದಲ್ಲಿ ಚಿತ್ರೀಕರಿಸಲಾಗಿದೆ. ಆದ್ದರಿಂದ ಈಗಾಗಲೇ ಶೋಟಿಂಗ್ ಸ್ಪಲ್ಪ ಮುಗಿದಿದೆ ಎಂದಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more