ಖಾಸಗಿ ಬಸ್ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು ಭಕ್ತರು ಸೇರಿ ಅನೇಕರಿಗೆ ಗಾಯ

ಹೈದರಾಬಾದ್: ಎರಡು ಖಾಸಗಿ ಬಸ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, 25 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಪೂತಲಪಟ್ಟು ನಾಯ್ಡುಪೇಟ ಪ್ರಧಾನ ರಹದಾರಿಯಲ್ಲಿನ‌ ಕಾಸಿಪಂಟ್ಲ ಹೆರಿಟೇಜ್ ಬಳಿ ನಡೆದಿದೆ.

ವಿಜಯವಾಡದಿಂದ ಕುಪ್ಪಂಗೆ ಹೊರಟಿದ್ದ ವೋಲ್ವೋ ಬಸ್​ಗೆ ಶಬರಿ‌ಮಲೈನಿಂದ -ತೆಲಂಗಾಣದ ನಲಗೊಂಡಗೆ‌ ಹೋಗುತ್ತಿದ್ದ ಇನ್ನೊಂದು ಖಾಸಗಿ ಬಸ್ ಡಿಕ್ಕಿಯಾಗಿದೆ. ಇದರ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ತಿರುಪತಿಯ ರುಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಆಂಧ್ರಪ್ರದೇಶದ ರಮೇಶ್ ಹಾಗೂ ಪ್ರಸಾದ್ ಎಂದು ಗುರುತಿಸಲಾಗಿದ್ದು, ರಮೇಶ್ ಚಾಲಕನಾಗಿದ್ದ, ಪ್ರಸಾದ್ ವೋಲ್ವೋ ಬಸ್ ಅಟೆಂಡರ್ ಎಂದು ತಿಳಿದು ಬಂದಿದೆ.

Related Tags:

Related Posts :

Category:

error: Content is protected !!