ಕಾರು-ಬೈಕ್ ನಡುವೆ ಅಪಘಾತ: 2 ತಿಂಗಳ ಮಗು ಸೇರಿ ಇಬ್ಬರು ದುರ್ಮರಣ

ದಾವಣಗೆರೆ: ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿಯಾಗಿ 2 ತಿಂಗಳ ಹೆಣ್ಣು ಮಗು ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಬಳಿಯ ನುಗ್ಗಿಹಳ್ಳಿ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿದ್ದ ಸಂತೆಬೆನ್ನೂರು ನಿವಾಸಿ ವೃದ್ಧೆ ಚಂದ್ರಮ್ಮ ಶ್ರೀನಿವಾಸ ಆಚಾರ್ಯ (70), ಬೈಕ್‌ನಲ್ಲಿದ್ದ ಹಲಗೇರಿ ನಿವಾಸಿ 2 ತಿಂಗಳ ಮಗು ಮನ್ವಿತಾ ದುರ್ಮರಣ ಹೊಂದಿದ್ದಾರೆ.

ಮಗುವಿನ ತಂದೆ-ತಾಯಿ ಸೇರಿ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags:

Related Posts :

Category:

error: Content is protected !!