ಆಟೋ ಡಿಕ್ಕಿ, ಬೈಕ್​ನಲ್ಲಿದ್ದ ಅಳಿಯ-ಮಾವ ಸ್ಥಳದಲ್ಲೇ ದುರ್ಮರಣ

ದಾವಣಗೆರೆ: ಆಟೋ-ಬೈಕ್ ನಡುವೆ ಡಿಕ್ಕಿಯಾಗಿ ಅಳಿಯ ಹಾಗೂ ಮಾವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಅಣಬೇರು ಗ್ರಾಮದ ಮಹಬಳೇಶಪ್ಪ(50), ನಲ್ಕುಂದ ಗ್ರಾಮದ ಈಶಪ್ಪ(60) ಮೃತ ದುರ್ದೈವಿಗಳು.

ಸ್ವಗ್ರಾಮದಿಂದ ದಾವಣಗೆರೆಗೆ ಬೈಕ್​ನಲ್ಲಿ ಅಳಿಯ ಹಾಗೂ ಮಾವ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ಆಟೋ ಡಿಕ್ಕಿಯೊಡೆದಿದೆ. ಹೀಗಾಗಿ ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Related Tags:

Related Posts :

Category:

error: Content is protected !!