ಮುಂಬೈನಿಂದ ರೈಲಿನಲ್ಲಿ ಆಗಮಿಸಿದ್ದ ಇಬ್ಬರು ಆಟೋದಲ್ಲಿ ಪರಾರಿ, ಕ್ರಿಮಿನಲ್ ಕೇಸ್ ಎಚ್ಚರಿಕೆ

ಬೆಂಗಳೂರು: ಸುಮಾರು 2 ತಿಂಗಳ ಬಳಿಕ ಬೆಂಗಳೂರಿಗೆ ಉದ್ಯಾನ್ ಎಕ್ಸ್‌ಪ್ರೆಸ್ ಆಗಮಿಸಿದ್ದು, ಮುಂಬೈನಿಂದ 1,734 ಪ್ರಯಾಣಿಕರು ಆಗಮಿಸಿದ್ದಾರೆ. ರೈಲಿನಲ್ಲಿ ಬಂದ ಎಲ್ಲ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಿ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಬೇಕಾಗಿದೆ.

ಆದ್ರೆ, ಕ್ವಾರಂಟೈನ್ ಮಾಡುವ ವಿಚಾರದಲ್ಲಿ ಅಧಿಕಾರಿಗಳ ಅಜಾಗರುಕತೆ ಎದ್ದುಕಾಣುತ್ತಿದೆ. ಸರಿಯಾದ ಭದ್ರತೆ ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಇಬ್ಬರು ಪ್ರಯಾಣಿಕರು ಕೆಎ 02, 9780 ನೋಂದಣಿಯ ಆಟೋದಲ್ಲಿ ಪರಾರಿಯಾಗಿದ್ದಾರೆ. ಕ್ವಾರಂಟೈನ್​ನಲ್ಲಿರ ಬೇಕಾಗಿದ್ದವರು ಇದೀಗ ಪರಾರಿಯಾಗಿದ್ದಾರೆ. ಹಾಗಾಗಿ ಬೆಂಗಳೂರಿನ ಜನತೆಗೆ ಆತಂಕ ಶುರುವಾಗಿದೆ. ರಾಜ್ಯದ ಪ್ರಯಾಣಿಕರೆಂದು ತಿಳಿದು ಪೊಲೀಸರ ಎಡವಟ್ಟು ಮಾಡಿಕೊಂಡಿದ್ದಾರೆ. ಅವರನ್ನ ಕರೆತರಲು ಪೊಲೀಸ್ ಅಧಿಕಾರಿಗಳು ಬುಲೆಟ್​ ಬೈಕ್​ನಲ್ಲಿ ತೆರಳಿದ್ದಾರೆ.

ಕ್ರಿಮಿನಲ್ ಕೇಸ್ ಎಚ್ಚರಿಕೆ:
ಮುಂಬೈನಿಂದ ಆಗಮಿಸಿದ್ದ ಪ್ರಯಾಣಿಕರು ಪರಾರಿಯಾಗಿದ್ದಾರೆ. ಪ್ರಯಾಣಿಕರು ತಾವಾಗಿಯೇ ಬಂದು ಕ್ವಾರಂಟೈನ್ ಆಗಬೇಕು, ಇಲ್ಲದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಪ್ರಯಾಣಿಕರೆಂದು ತಿಳಿದು ಎಡವಟ್ಟು:
ಮುಂಬೈನಿಂದ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಯಾದಗಿರಿ, ಕಲಬುರಗಿ ಮಾರ್ಗದಲ್ಲಿ ಬೆಂಗಳೂರಿಗೆ ಬಂದಿತ್ತು. ರೈಲಿನಲ್ಲಿ ರಾಜ್ಯದ ಕಾರ್ಮಿಕರು ಬಂದಿದ್ದಾರೆಂದು ಗೊಂದಲವಾಗಿದೆ. ಈ ವೇಳೆ ಮುಂಬೈನಿಂದ ಬಂದವರನ್ನ ಪೊಲೀಸರು ಬಿಟ್ಟಿದ್ದಾರೆ. ಹಾಗಾಗಿ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಹಣ ನೀಡಲ್ಲ:
ಬಿಎಂಟಿಸಿ ಬಸ್ ಪ್ರಯಾಣಕ್ಕೆ 100 ರೂಪಾಯಿ ನೀಡುವುದಿಲ್ಲ. ನನ್ನ ಬಳಿ ಹಣ ಇಲ್ಲ, ಹೀಗಾಗಿ ಹಣವನ್ನು ನೀಡಲ್ಲ. ಬೇಕಿದ್ದರೆ ನನ್ನನ್ನು ಮತ್ತೆ ಮುಂಬೈಗೆ ವಾಪಸ್ ಕಳುಹಿಸಿಬಿಡಿ ಎಂದು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ನಮಗೆ ಎಲ್ಲವೂ ಫ್ರೀ ಇದೆ ಅಂದಿದ್ದಕ್ಕೆ ನಾವು ಬಂದಿದ್ದೇವೆ. ಈಗ ಹಣ ಕೇಳಿದರೆ ಹೇಗೆ? 3 ತಿಂಗಳು ಹೇಗೆ ಜೀವನ ಸಾಗಿಸಿದ್ದೇವೆಂದು ನಮಗೆ ಗೊತ್ತು. ನಾವು ಯಾವುದೇ ಕಾರಣಕ್ಕೂ ಹಣ ನೀಡಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more