ಬಸ್-ಲಾರಿ ನಡುವೆ ಭೀಕರ ಅಪಘಾತ: 20 ಮಂದಿ ಸಜೀವ ದಹನ

ಉತ್ತರಪ್ರದೇಶದ ಕನೌಜ್‌ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಬಸ್, ಲಾರಿ ಡಿಕ್ಕಿಯಾಗಿ ಸುಮಾರು 20 ಜನ ಸಜೀವ ದಹನವಾಗಿದ್ದರೆ. ಘಟನೆಯಲ್ಲಿ 21ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೃತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.

ರಾಜಧಾನಿ ಗೆಲ್ಲಲು ಹೊಸ ಅಸ್ತ್ರ!
ಈ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಅಂತಾ ಪಣತೊಟ್ಟಿರುವ ಕಮಲಪಾಳಯ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ಬಾರಿ ಸಿಎಂ ಅಭ್ಯರ್ಥಿ ಇಲ್ಲದೆಯೇ ಚುನಾವಣೆ ಫೇಸ್ ಮಾಡಲು ನಿರ್ಧರಿಸಲಾಗಿದ್ದು, ಆ ಮೂಲಕ ಪ್ರಧಾನಿ ಮೋದಿ ವರ್ಚಸ್ಸಿನಿಂದ ಗೆಲುವು ಸಾಧಿಸಲು ಪ್ರಯತ್ನ ಸಾಗಿದೆ.

‘ದೀದಿ’ ನಾಡಿಗೆ ‘ಮೋದಿ’ ಎಂಟ್ರಿ!
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ. ಪಿಎಂ ಆಗಮನದ ವೇಳೆ ಅಲ್ಲಿನ ಸ್ಥಿತಿ ಶಾಂತವಾಗಿರುತ್ತಾ, ಇಲ್ಲ ವಿಕೋಪಕ್ಕೆ ತಿರುಗುತ್ತಾ ಅನ್ನೋದೆ ಉತ್ತರ ಸಿಗದ ಪ್ರಶ್ನೆಯಾಗಿದೆ. ಶಿಷ್ಟಾಚಾರದಂತೆ ಸಿಎಂ ಮಮತಾ ಬ್ಯಾನರ್ಜಿ ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಧಾನಿಯನ್ನ ಸ್ವಾಗತಿಸಬೇಕಿದ್ದು, ಮಮತಾ ನಡೆ ಕುತೂಹಲ ಕೆರಳಿಸಿದೆ.

Related Tags:

Related Posts :

Category:

error: Content is protected !!