ಚಿಲಿಯಲ್ಲಿ ಅಬ್ಬರಿಸಿದ ಅಗ್ನಿ, 200ಕ್ಕೂ ಹೆಚ್ಚು ಮನೆಗಳು ಭಸ್ಮ

ಚಿಲಿಯ ಜನನಿಬೀಡ ಪ್ರದೇಶವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಹರಸಾಹಸದ ಮಧ್ಯೆಯೂ ಬೆಂಕಿ ಭೀಕರ ರೂಪ ತಾಳಿತ್ತು. ಹೀಗಾಗಿ ನೂರಾರು ಮನೆಗಳು ಬೆಂಕಿಗೆ ಆಹುತಿಯಾಗಿವೆ.

ಹಿಡಿತಕ್ಕೆ ಸಿಗುತ್ತಿಲ್ಲ ಕಾಡ್ಗಿಚ್ಚು..!
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಅರಣ್ಯದಲ್ಲಿ ಹೊತ್ತಿರುವ ಕಾಡ್ಗಿಚ್ಚು ಇನ್ನೂ ತಣ್ಣಗಾಗಿಲ್ಲ. ಅಲ್ಲಲ್ಲಿ ಬೆಂಕಿಯನ್ನ ತಹಬದಿಗೆ ತಂದಿದ್ದರೂ, ಕಾಡ್ಗಿಚ್ಚಿನ ಅಬ್ಬರ ಮುಂದುವರಿದಿದೆ. ಆಸ್ಟ್ರೇಲಿಯಾ ಸರ್ಕಾರ ಬೆಂಕಿ ನಂದಿಸಲು ಮತ್ತಷ್ಟು ಅಗ್ನಿಶಾಮಕ ಪಡೆಗಳನ್ನ ನ್ಯೂ ಸೌತ್ ವೇಲ್ಸ್​ಗೆ ರವಾನಿಸಿದೆ.

ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ:
ಕಜಕಿಸ್ತಾನದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇನ್ನು ಹತ್ತಾರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಟೇಕಾಫ್ ಆಗುವಾಗ ವಿಮಾನ ಕಟ್ಟಡವೊಂದಕ್ಕೆ ಡಿಕ್ಕಿಯಾಗಿ ದುರಂತ ಸಂಭವಿಸಿತ್ತು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!