ವಿಜಯಪುರದಲ್ಲಿ ಕೊರೊನಾ ಸ್ಫೋಟ, ಇಂದು ಸೋಂಕು ಎಷ್ಟು ಮಂದಿಗೆ ಗೊತ್ತಾ?

ವಿಜಯಪುರ:ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗದಂತೆ ಎಲ್ಲೆಡೆ ಹಬ್ಬುತ್ತಿದೆ. ಅದಕ್ಕೆ ತಕ್ಕ ನಿದರ್ಶನವೆಂಬಂತೆ ಇಂದು ಕೇವಲ ವಿಜಯಪುರ ಜಿಲ್ಲೆ ಒಂದರಲ್ಲೇ 256 ಜನರಿಗೆ ಸೋಂಕು ತಗುಲಿದೆ.

ವಿಜಯಪುರ ಜಿಲ್ಲೆ ಒಂದರಲ್ಲೇ ಇದುವರೆಗೆ 4717 ಜನರಿಗೆ ಕೊರೊನಾ ಸೋಂಕು ಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟಾರೆಯಾಗಿ 51 ಜನ ಸೋಂಕಿಗೆ ಬಲಿಯಾಗಿದ್ದಾರೆ . ಇಂದು ಒಂದೇ ದಿನ 256 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರನ್ನು ಬಲಿ ಪಡೆದಿದೆ. ಜಿಲ್ಲೆಯಲ್ಲಿ ಇದುವರೆಗೆ 3595 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ನಿನ್ನೆ 1890 ಜನರ ಗಂಟಲು ದ್ರವ ಪರೀಕ್ಷೆ ಮಾಡಿದ್ದು, ಅದರ ಪೈಕಿ 256 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

Related Tags:

Related Posts :

Category: