2ನೇ ದಿನವೂ ಮೆಜೆಸ್ಟಿಕ್​ನಲ್ಲಿ ಜನವೋ ಜನ, ಊರುಗಳಿಗೆ ತೆರಳೋಕೆ ಪ್ರಯಾಣಿಕರ ಆಗಮನ

ಬೆಂಗಳೂರು: ರಾಜ್ಯದಲ್ಲಿ ಇಂದು ಎರಡನೇ ದಿನದ ಬಸ್ ಸಂಚಾರ ಆರಂಭವಾಗಿದೆ. 2 ಸಾವಿರ ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ನಡೆಸಲಿವೆ. ಎರಡನೇ ದಿನ ಆಗಿರುವುದರಿಂದ ಇಂದು ಬಸ್​ಗಳ ಬೇಡಿಕೆ ಹೆಚ್ಚಿದೆ.

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಆಗಮಿಸಿದ್ದಾರೆ. ಉತ್ತರ ಕರ್ನಾಟಕಕ್ಕೂ ಬಸ್ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಕಂಡು ಬಂದ್ರು. ಅನೇಕ ಮಂದಿ ಮುಂಜಾನೆಯಿಂದಲೇ ಬಸ್​ಗಳಿಗಾಗಿ ಕಾಯುತ್ತಿದ್ದಾರೆ. ನಿನ್ನೆಗಿಂತ ಇಂದು ಕೊಂಚ ಮಟ್ಟಿಗೆ ಜನ ಬಸ್ ನಿಲ್ದಾಣಗಳಲ್ಲಿ ಕಂಡು ಬರ್ತಿದ್ದಾರೆ.

ಕಂಟೇನ್ಮೆಂಟ್ ಜೋನ್ ಆಗಿರುವ ಕಾರಣ ಶಿವಾಜಿನಗರ ಸಂಪೂರ್ಣ ಸ್ತಬ್ಧವಾಗಿದೆ. ಶಿವಾಜಿನಗರ ಬಸ್ ನಿಲ್ದಾಣದಿಂದ ಯಾವುದೇ ಬಿಎಂಟಿಸಿ ಬಸ್ ಹೊರಡಲ್ಲ. ಹೀಗಾಗಿ ಬಂದ ಪ್ರಯಾಣಿಕರನ್ನು ಪೊಲೀಸರು ಇಂಡಿಯನ್ ಎಕ್ಸ್​ಪ್ರೆಸ್ ಬಳಿ ಬಸ್ ಹತ್ತಲು ಕಳುಹಿಸುತ್ತಿದ್ದಾರೆ.

 

Related Tags:

Related Posts :

Category: