ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್​?

ಬೆಂಗಳೂರು: ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್ ಮಾಡಿರುವ ಆರೋಪ ಕೇಳಿಬಂದಿದೆ. ಕಿಯಾರಾ ಡೆಂಟಲ್ ಕ್ಲಿನಿಕ್​ನ ದಂತವೈದ್ಯೆ ಡಾ.ಮೋನಿಕಾ ವಿರುದ್ಧ ಆರೋಪ ಮಾಡಲಾಗಿದೆ.

ಡಿ.24ರಂದು ಹಲ್ಲು ನೋವಿನ ಚಿಕಿತ್ಸೆಗೆ ಕಿಯಾರಾ ಡೆಂಟಲ್ ಕ್ಲಿನಿಕ್​ಗೆ 19 ವರ್ಷದ ವೇಣು ತೆರಳಿದ್ದ. ದಂತವೈದ್ಯೆ ಡಾ.ಮೋನಿಕಾ ಅವರು ವೇಣು ದವಡೆಗೆ ಇಂಜೆಕ್ಷನ್​ ಕೊಟ್ಟು ಚಿಕಿತ್ಸೆ ನೀಡಿದ್ದರು. ಇದಾದ ಬಳಿಕ ವೇಣು ಗಂಟಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಊತದಿಂದ ಆಹಾರ ಸೇವಿಸಲು, ಮಾತನಾಡಲು ಆಗತ್ತಿರಲಿಲ್ಲ. ಕೂಡಲೇ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ವೇಣುಗೆ 3 ಆಪರೇಶನ್ ಮಾಡಲಾಗಿದೆ.

ಡೆಂಟಲ್ ಡಾಕ್ಟರ್​ ಮೋನಿಕಾ ನೀಡಿದ್ದ ಚಿಕಿತ್ಸೆಯಲ್ಲಿ ಎಡವಟ್ಟು ಆಗಿದೆ ಎಂದು ವೇಣು ತಂದೆ ಶ್ರೀನಿವಾಸ್‌ ಗಂಭೀರವಾಗಿ ಆರೋಪಿಸಿದ್ದಾರೆ. ಡಾ.ಮೋನಿಕಾ ವಿರುದ್ಧ ಹೆಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!