ನೀರಿನ ಸಂಪಿಗೆ ಬಿದ್ದು 3 ವರ್ಷದ ಬಾಲಕಿ ಸಾವು

ಮೈಸೂರು: ನೀರಿನ ಸಂಪಿಗೆ ಬಿದ್ದು ಬಾಲಕಿ ಮೃತಪಟ್ಟ ದುರ್ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ. ಮಹೇಶ್ ಕುಮಾರ್ ಅವರ ಪುತ್ರಿ ಛಾಯಾ (3) ಮೃತ ದುರ್ದೈವಿ.

ಗ್ರಾಮದ ಶಿವಲಿಂಗೇಗೌಡ ಅವರು ತಮ್ಮ ಮನೆ ನಿರ್ಮಾಣಕ್ಕೆ ನಿರ್ಮಿಸಿದ್ದ ನೀರಿನ ಸಂಪ್​ನಲ್ಲಿ ಬಿದ್ದು 3 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಸಂಪ್ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಮನೆ ಮಾಲೀಕನ ಬೇಜವಾಬ್ದಾರಿಯಿಂದ ಮಗು ಮೃತಪಟ್ಟಿದೆ ಎಂದು ಮೃತ ಬಾಲಕಿ ಛಾಯಾ ಪೋಷಕರು ಆರೋಪಿಸಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Tags:

Related Posts :

Category:

error: Content is protected !!