ಒಂದೇ ಏರಿಯಾದ 37 ಪೌರಕಾರ್ಮಿಕರಿಗೆ ಸೋಂಕು ದೃಢ, ಎಲ್ಲಿ?

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ವಾರಿಯರ್ಸ್​ನ ಬೆನ್ನುಬಿಡದೆ ಕಾಡ್ತಿದೆ ಮಹಾಮಾರಿ. ಇದೀಗ, ನಗರದ ಪೌರಕಾರ್ಮಿಕರಿಗೆ ಹೆಮ್ಮಾರಿ ಬಿಗ್ ಶಾಕ್ ಕೊಟ್ಟಿದೆ. ರಾಯಪುರ ವಾರ್ಡ್​ನಲ್ಲಿ ವಾಸಿಸುವ 37 ಮಂದಿ ಪೌರಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

ರಾಯಪುರಂನಲ್ಲಿ ವಾಸವಿರುವ ಪೌರಕಾರ್ಮಿಕರಿಗೆ ರ್‍ಯಾಂಡಮ್ ಟೆಸ್ಟ್ ‌ಮಾಡಲಾಗಿತ್ತು. ಈ ವೇಳೆ 37 ಮಂದಿ ಸೋಂಕು ಪತ್ತೆಯಾಗಿದೆ. ಜೊತೆಗೆ, ಎಲ್ಲರೂ ಸೋಂಕಿನ ಲಕ್ಷಣಗಳಿಲ್ಲದವರು ಎಂದು ತಿಳಿದುಬಂದಿದೆ. ಹೀಗಾಗಿ ಎಲ್ಲರನ್ನ BIEC ಕೋವಿಡ್ ಕೇರ್ ಸೆಂಟರ್​ಗೆ ಕಳಿಸಲಾಗಿದೆ.

ಜೊತೆಗೆ, ಪೌರಕಾರ್ಮಿಕರ ಕುಟುಂಬಕ್ಕೆ ಯಾವುದೇ ಸಮಸ್ಯೆ ಆಗದಂತೆ‌ ಶಾಸಕ ಜಮೀರ್ ಅಹಮದ್ ಭರವಸೆ ನೀಡಿದ್ದಾರೆ. ಒಂದು ತಿಂಗಳ ಪಡಿತರ ವ್ಯವಸ್ಥೆ ಮಾಡುತ್ತೇನೆ ಎಂದು ಆಶ್ವಾಸನೆ ಸಹ ಕೊಟ್ಟಿದ್ದಾರೆ. ಜಮೀರ್ ಭರವಸೆ ನೀಡಿದ ಬಳಿಕ ಸೋಂಕಿತ ಪೌರಕಾರ್ಮಿಕರು‌ BIEC ಕೋವಿಡ್ ಕೇರ್ ಸೆಂಟರ್​ಗೆ ಶಿಫ್ಟ್ ಆದರು.

Related Tags:

Related Posts :

Category: