BREAKING NEWS
India vs Australia, 2nd ODI, LIVE Score: ಫಿಂಚ್-ವಾರ್ನರ್ ಭರ್ಜರಿ ಜೊತೆಯಾಟ

ಲಾಕ್​ಡೌನ್ ಬಳಿಕ ಮೊದಲ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ, ಇಂದು ಆಸ್ಟ್ರೇಲಿಯಾ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡಿರುವ ಭಾರತಕ್ಕೆ ಇಂದಿನ ಆಟವನ್ನು ಗೆಲ್ಲಲೇಬೇಕಾದ ಒತ್ತಡವಿದೆ‌. ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಇರುವ ಭಾರತವು, ಸರಣಿ ಸಮಬಲ ಕಾಯ್ದುಕೊಳ್ಳಲು ಹೋರಾಡಬೇಕಿದೆ. ಗೆಲ್ಲುವ ಉತ್ಸಾಹದಲ್ಲಿ ಕೊಹ್ಲಿ-ಫಿಂಚ್ ಪಡೆ! ಮೊದಲ ಪಂದ್ಯದ ತಪ್ಪುಗಳನ್ನು ಮತ್ತೆ ಮರುಕಳಿಸದೆ, ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿ ಕೊಹ್ಲಿ

x

ಕೊವಿಡ್-19: ರಾಜ್ಯದಲ್ಲಿಂದು 51 ಸಾವು, 5,356 ಹೊಸ ಸೋಂಕಿತರು

  • Arun Belly
  • Published On - 21:50 PM, 23 Oct 2020

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 51 ಜನ ಕೊವಿಡ್-19 ಸೋಂಕಿನಿಂದ ಮರಣಿಸಿದ್ದಾರೆ ಮತ್ತು ಹೊಸದಾಗಿ 5,356 ಜನ ಸೋಂಕಿಗೊಳಗಾಗಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 10,821 ಅಗಿದ್ದು ಒಟ್ಟು ಸೋಂಕಿತರ ಸಂಖ್ಯೆ 7,93,907 ತಲುಪಿದೆ. ವ್ಯಾಧಿಗೀಡಾದವರಲ್ಲಿ 6,93,583 ಜನ ಗುಣಮುಖರಾಗಿದ್ದಾರೆ ಮತ್ತು ಉಳಿದ 89,483 ಸೋಂಕಿತರಿಗೆ ನಿಗದಿತ ಕೊವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಗೆಯೇ, ಬೆಂಗಳೂರಿನಲ್ಲಿ ಇಂದು ಮಹಾಮಾರಿ 21ಜನರನ್ನು ಸಾಯಿಸಿದೆ ಮತ್ತು ಹೊಸದಾಗಿ 2,688 ಜನರಿಗೆ ತಗುಲಿಕೊಂಡಿದೆ. ನಗರದಲ್ಲಿ ಸೋಂಕಿಗೆ ಇದುವರೆಗೆ ಬಲಿಯಾದವರು 3,688 ರಷ್ಟಾದರೆ ಸೋಂಕಿತರು 3,21,054 ಆಗಿದ್ದಾರೆ.

ಸೋಂಕಿತರ ಪೈಕಿ 2,60,602 ಜನ ಗುಣಮುಖರಾಗಿದ್ದಾರೆ ಮತ್ತು ಮಿಕ್ಕಿದ 56,763 ಜನಕ್ಕೆ ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ತಿಳಿಸುತ್ತದೆ.