ಬುಧವಾರವೂ ಕೊವಿಡ್ ಸಂಬಂಧಿತ ಸಾವು ಮತ್ತು ಸೋಂಕು ಇಳಿಮುಖ

  • Arun Belly
  • Published On - 22:33 PM, 28 Oct 2020

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಸಾಯಂಕಾಲ ದೊರೆತಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 55 ಜನರ ಸಾವನ್ನಪ್ಪಿದ್ದು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3,146 ಜನರಲ್ಲಿ ಸೋಂಕು ಧೃಡಪಟ್ಟಿದೆ.

ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 11,046 ಜನ ಮರಣಿಸಿದ್ದಾರೆ ಹಾಗೂ ಒಟ್ಟು ಸೋಂಕಿತರ ಸಂಖ್ಯೆ 8,12,784ಕ್ಕೇರಿದೆ. ಅವರ ಪೈಕಿ 7,33,558 ಜನ ಗುಣಮುಖರಾಗಿದ್ದಾರೆ ಮತ್ತು ಉಳಿದ 68,161 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊವಿಡ್-19 ವ್ಯಾಧಿಗೆ 23 ಜನ ಬಲಿಯಾಗಿದ್ದಾರೆ ಮತ್ತು ಹೊಸದಾಗಿ 1,612 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ ಕೊರೊನಾದಿಂದ ಈವರೆಗೆ 3,801 ಜನ ಸತ್ತಿದ್ದು ಸೋಂಕು ಪೀಡಿತರ ಸಂಖ್ಯೆ 3,30,862 ತಲುಪಿದೆ.

ಸೋಂಕಿತರ ಪೈಕಿ 2,83,300 ಜನರು ಗುಣಮುಖರಾಗಿದ್ದಾರೆ ಮತ್ತು ಮಿಕ್ಕಿದ 43,760 ಜನರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.