ದುರ್ಗದಲ್ಲಿ ಕಾರಿನ ಗಾಜು ಒಡೆದು 6 ಲಕ್ಷ ನಗದು ಕಳವು

ಚಿತ್ರದುರ್ಗ: ನಗರದ ಕಾರ್ಪೊರೇಷನ್ ಬ್ಯಾಂಕ್ ಬಳಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 6 ಲಕ್ಷ ರೂಪಾಯಿ ಕಳವು ಮಾಡಿರುವ ಘಟನೆ ನಡೆದಿದೆ.

ಗುತ್ತಿಗೆದಾರ ಪ್ರಕಾಶ್ ಎಂಬುವರು ಬ್ಯಾಂಕ್​ನಿಂದ ಹಣ ಬಿಡಿಸಿಕೊಂಡು ಕಾರಲ್ಲಿಟ್ಟು ಮತ್ತೆ ಬ್ಯಾಂಕ್​ ಒಳಗೆ ತೆರಳಿದ್ದಾರೆ. ಈ ವೇಳೆ ಕಾರಿನ ಗಾಜು ಒಡೆದು 6 ಲಕ್ಷ ಹಣ ಕದ್ದು ಖದೀಮರು ಪರಾರಿಯಾಗಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಬೆಳಗ್ಗೆಯಷ್ಟೇ ಮಂಗಳೂರಿನಲ್ಲಿ ಬ್ಯಾಂಕ್​ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ 15 ಲಕ್ಷ ರೂ. ದರೋಡೆಯಾಗಿತ್ತು.

Related Tags:

Related Posts :

Category: