ಬೆಳಗಾವಿ ಜಿಲ್ಲೆಯ 6 ತಾಲೂಕು ಲಾಕ್ ಡೌನ್ ಪಕ್ಕಾ? ಕಾರಣ ಏನು ಗೊತ್ತಾ?

ಬೆಳಗಾವಿ: ಇಡೀ ಜಿಲ್ಲೆಯ ಬದಲಿಗೆ ಆರು‌ ತಾಲೂಕುಗಳನ್ನು ಲಾಕ್ ಡೌನ್ ಮಾಡುವ ಪ್ರಸ್ತಾವನೆ ಉನ್ನತಮಟ್ಟದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೆಳಗಾವಿಯ ನೂತನ ಜಿಲ್ಲಾಧಿಕಾರಿ ಸಿಎಂ ಯಡಿಯೂರಪ್ಪಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಡಿ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ತಾಲೂಕುಗಳ ಬಂದ್ ಬಹುತೇಕ ಪಕ್ಕಾ ಆಗಿದ್ದು, ಜಿಲ್ಲೆಯ ಅಥಣಿ, ಕಾಗವಾಡ, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ್ ಮತ್ತು ಮೂಡಲಗಿ ಬಹುತೇಕ ಲಾಕ್ ಡೌನ್ ಆಗಲಿವೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ. ಅದಕ್ಕೂ ಮುನ್ನ ಸ್ಥಳೀಯ ಜನಪ್ರಿತಿನಿಧಿಗಳ ಜತೆಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುವಂತೆಯೂ‌ ಸಿಎಂ ಯಡಿಯೂರಪ್ಪ ಡಿಸಿಗೆ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ.

ಗಡಿ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಗಡಿ ತಾಲೂಕುಗಳನ್ನ ಲಾಕ್ ಡೌನ್ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Related Tags:

Related Posts :

Category:

error: Content is protected !!