ಹೆಣ್ಣು ನೋಡಲು ಹೋಗಿದ್ದ 8 ಮಂದಿಗೆ ಕೊರೊನಾ, ಬ್ರೋಕರ್ ತರಿಸಿದ್ನಾ ಮನೆಗೆ ಹೆಮ್ಮಾರಿ!

ಚಿಕ್ಕಮಗಳೂರು: ಬ್ರೋಕರ್ ಜೊತೆ ಹೆಣ್ಣು ನೋಡಲು ಹೋದ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಗಡಿ ಗಿರಿಯಾಪುರ, ದಂದೂರು ಸೇರಿದಂತೆ ಒಂದೇ ಕುಟುಂಬದ 20 ಜನ ಬ್ರೋಕರ್ ಜೊತೆ ತುಮಕೂರಿಗೆ ವಧುವನ್ನು ನೋಡಲು ಹೋಗಿದ್ದರು. ವಧುವನ್ನು ನೋಡಿ ಹಿಂದಿರುಗುವಾಗ ಹೆಮ್ಮಾರಿ ಕೊರೊನಾ ಜೊತೆ ವಾಪಸ್ಸು ಬಂದಿದ್ದಾರೆ. ಹುಡುಗಿಯನ್ನು ನೋಡಲು ಹೋದ ಸುಮಾರು 20 ಮಂದಿಯಲ್ಲಿ 8 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದವನಾಗಿರುವ ಮದುವೆ ಬ್ರೋಕರ್​ಗೆ ಕೆಲ ದಿನಗಳ ಹಿಂದೆಯೇ ಹೆಮ್ಮಾರಿ ಕೊರೊನಾ ವಕ್ಕರಿಸಿದೆ. ಈಗಾಗಲೇ ಶಿವಮೊಗ್ಗ ಕೋವಿಡ್ ಆಸ್ಪತ್ರೆಯಲ್ಲಿ ಬ್ರೋಕರ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಬ್ರೋಕರ್ ಜೊತೆ ತೆರಳಿದ್ದವರಿಗೆ ಕೊರೊನಾ ಪಾಸಿಟಿವ್ ಬರುತ್ತಿರೋದ್ರಿಂದ ಹುಡುಗನ ಕುಟುಂಬಸ್ಥರು ದಂಗಾಗಿ ಹೋಗಿದ್ದಾರೆ. ಸಂಬಂಧ ಬೆಳೆಸಲು ಹೋಗಿ ಕೊರೊನಾ ಬೆಸೆದಿದ್ದಕ್ಕೆ ಶಾಕ್ ಆಗಿ ಹೋಗಿದ್ದಾರೆ. ತುಮಕೂರಿಗೆ ಹೋಗಿ ಬಂದ ಗ್ರಾಮಸ್ಥರಿಗೆ ಸೋಂಕು ತಗುಲಿರೋದ್ರಿಂದ ಸಂಬಂಧ ಬೆಸೆಯಲು ಹೋಗಿದ್ದ ಹಳ್ಳಿಯ ಜನರಲ್ಲಿ ಇದೀಗ ಆತಂಕ ಎದುರಾಗಿದೆ.

ಜಿಲ್ಲೆಯ ಜನರಲ್ಲಿ ಹೆಚ್ಚಾಯ್ತು ಆತಂಕ
ಇನ್ನೂ ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣಗಳು ಇರಲಿಲ್ಲ. ಆದರೆ ಮೇ 19 ರಿಂದ ಆರಂಭವಾದ ಪಾಸಿಟಿವ್​ಗಳ ಸಂಖ್ಯೆ ಇಂದು 70ಕ್ಕೆ ಏರಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 17 ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ನಿನ್ನೆ ಪತ್ತೆಯಾಗಿರುವ 17 ಕೇಸ್​ಗಳ ಪೈಕಿ ಬಹುತೇಕ ಕೇಸ್​ಗಳಿಗೆ ಬೆಂಗಳೂರಿನ ನಂಟಿದೆ. ಬೆಂಗಳೂರಿನಲ್ಲಿ ಎಂಎನ್ಸಿ ಕಂಪನಿ ಉದ್ಯೋಗಿ ಬೆಂಗಳೂರಿನಿಂದ ಹಿಂದಿರುಗಿ ಬಂದು ತನ್ನ ಕುಟುಂಬದ ಮೂವರಿಗೆ ಸೋಂಕನ್ನು ಅಂಟಿಸಿದ್ದಾನೆ.

ತರೀಕೆರೆ ತಾಲೂಕಿನಿಂದ ಪ್ರತಿದಿನ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿಗೆ ಹೋಗಿ ಬರುತ್ತಿದ್ದ ಉಪನ್ಯಾಸಕರಿಗೂ ಹೆಮ್ಮಾರಿ ಅಂಟಿದೆ. ಬೆಂಗಳೂರಿನಿಂದ ಹಿಂದಿರುಗಿ ಬಂದಿದ್ದ ವಕೀಲ, ತರಕಾರಿ ವ್ಯಾಪಾರಿ ಹಾಗೂ ಯುವಕನೋರ್ವನಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅವರು ಕೂಡ ತಮ್ಮ ಕುಟುಂಬದ ಒಬ್ಬೊಬ್ಬರಿಗೆ ಸೋಂಕು ತಗುಲಿಸಿದ್ದಾರೆ. ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು ಇದೇ ವೇಳೆ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಆತಂಕ ಇಮ್ಮಡಿಗೊಂಡಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more