ಇಂದು ಮತ್ತೆ 8,000 ಕ್ಕಿಂತ ಜಾಸ್ತಿ ಹೊಸ ಕೊವಿಡ್-19 ಪ್ರಕರಣಗಳು

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿನಿಂದ 86 ಜನ ಸಾವನ್ನಪ್ಪಿದ್ದಾರೆ ಮತ್ತು ಹೊಸದಾಗಿ 8,811 ಜನರಿಗೆ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಇದುವರೆಗೆ ಸೋಂಕಿಗೆ ಬಲಿಯಾಗಿರುವವರ ಸಂಖ್ಯೆ 8,503 ತಲುಪಿದೆ ಹಾಗೆಯೇ, ಸೋಂಕಿತರ ಸಂಖ್ಯೆ 5,66,023ಕ್ಕೇರಿದೆ. ಸೋಂಕಿತರ ಪೈಕಿ 4,55,719 ಜನ ಗುಣಮುಖರಾಗಿ ಮನೆಗಳಿಗೆ ವಾಪಸ್ಸಾಗಿದ್ದಾರೆ ಮತ್ತು ಉಳಿದ 1,01,782 ಸೋಂಕು ಪೀಡಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಬೆಂಗಳೂರಿನಲ್ಲಿ ಇಂದು ವ್ಯಾಧಿಗೆ 27 ಜನ ಬಲಿಯಾಗಿದ್ದಾರೆ ಮತ್ತು 4,083 ಜನರಲ್ಲಿ ಇಂದು ಸೋಂಕು ಕಾಣಿಸಿಕೊಂಡಿದೆ. ನಗರದಲ್ಲ್ಲಿ ಪಿಡುಗಿನಿಂದ ಇದುವರೆಗೆ ಮರಣಿಸಿದವರ ಸಂಖ್ಯೆ 2,821 ತಲುಪಿದೆ ಮತ್ತು ಸೋಂಕು ತಗುಲಿಸಿಕೊಂಡವರ ಸಂಖ್ಯೆ 2,16,630ಕ್ಕೇರಿದೆ. ಗುಣಮುಖರ ಸಂಖ್ಯೆ 1,70,430 ಇದ್ದರೆ ಮಿಕ್ಕಿದ 43,378 ಜನರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

Related Tags:

Related Posts :

Category:

error: Content is protected !!