ರೆಸಿಡೆನ್ಸಿ ಕಾಲೋನಿಯ ಬೆಂಚ್‌ ಕೆಳಗೆ ಅವಿತಿದ್ದ ಮೊಸಳೆ ಸೆರೆ

ಗುಜರಾತ್‌: ಗುಜರಾತ್‌ನ ವಡೋದರಾದ ಜನನಿಭಿಡ ಪ್ರದೇಶದಲ್ಲಿ ಮೊಸಳೆಯನ್ನು ಗುಜರಾತ್‌ನ ಪ್ರಾಣಿ ಸಂರಕ್ಷಣೆ ತಂಡ ರಕ್ಷಿಸಿ ವಶಪಡಿಸಿಕೊಂಡ ಘಟನೆ ಸಂಭವಿಸಿದೆ.

ವಡೋದರಾದ ಜನನಿಬಿಡ ಕಾಲೋನಿಯಲ್ಲಿನ ಬೆಂಚ್‌ನ ಕೆಳಗೆ ಮೊಸಳೆಯೊಂದು ಅವಿತಿರುವುದು ಗೊತ್ತಾಗಿದೆ. ಈ ಬಗ್ಗೆ ಸಿಕ್ಕ ಮಾಹಿತಿಯನ್ನು ಅನುಸರಿಸಿ ಗುಜರಾತ್‌ ಪ್ರಾಣಿಗಳ ಮೇಲಿನ ಹಿಂಸಾಚಾರ ತಡೆ ಮತ್ತು ಸಂರಕ್ಷಣಾ ಸೋಸೈಟಿ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಪಾದಚಾರಿ ಮಾರ್ಗದ ಬೆಂಚ್‌ ಕೆಳಗೆ ಅವಿತಿದ್ದ ಮೊಸಳೆಯನ್ನು ತಜ್ಞರು ಸೆರೆ ಹಿಡಿದು ರಕ್ಷಿಸಿದ್ದಾರೆ.

ಆದರೆ ಜನನಿಬಿಡವಾದ ಏರಿಯಾದಲ್ಲಿ ಈ ಮೊಸಳೆ ಹೇಗೆ ಬಂತು ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Related Tags:

Related Posts :

Category: