ಬಹಿರ್ದೆಸೆಗೆ ನದಿ ತೀರಕ್ಕೆ ಹೋದವ ಮೊಸಳೆಗೆ ತುತ್ತಾದ, ಎಲ್ಲಿ?

ಮೈಸೂರು: ಕಪಿಲಾ ನದಿ ದಡದಲ್ಲಿ ಬಹಿರ್ದೆಸೆಗೆಂದು ಹೋಗಿದ್ದ ವ್ಯಕ್ತಿಯನ್ನು ಮೊಸಳೆಯೊಂದು ಎಳೆದುಕೊಂಡು ಹೋಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಕೆ ಬೆಳತೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ಶಂಕರ್ ನಾಯಕ್ (43) ಎಂಬ ವ್ಯಕ್ತಿ ಕಪಿಲ ನದಿ ದಡದಲ್ಲಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಮೊಸಳೆಯೊಂದು ವ್ಯಕ್ತಿಯನ್ನು ಎಳೆದುಕೊಂಡು ಹೋಗಿದೆ ಎಂಬ ಮಾಹಿತಿಯನ್ನು ಪ್ರತ್ಯಕ್ಷದರ್ಶಿಯೊಬ್ಬರು ತಿಳಿದ್ದಾರೆ.

ಸ್ಥಳೀಯರಿಂದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಎಚ್ ಡಿ ಕೋಟೆ ಪೊಲೀಸರು ಹಾಗೂ ನುರಿತ ಈಜುಗಾರರಿಂದ ಕಪಿಲಾ ನದಿಯಲ್ಲಿ ಶಂಕರ್ ನಾಯಕನಿಗಾಗಿ ಹುಡುಕಾಟ ಶುರುವಾಗಿದೆ.

Related Tags:

Related Posts :

Category: