ಹಿಂದೂ ಧರ್ಮದ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ ಕಿಡಿಗೇಡಿಗೆ ಬಿತ್ತು ಚಪ್ಪಲಿ ಏಟು

ವಿಜಯಪುರ: ಹಿಂದೂ ಧರ್ಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕೋಪಗೊಂಡ ಗ್ರಾಮಸ್ಥರು ಯುವಕನೋರ್ವನನ್ನು ಹಿಗ್ಗಾಮುಗ್ಗಾ ಚಪ್ಪಲಿಯಿಂದ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಯಾಳವಾರ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಅನ್ಯಧರ್ಮದ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದ್ದರಿಂದ ರೊಚ್ಚಿಗೆದ್ದ ಕೆಲ ಗ್ರಾಮಸ್ಥರು ಯುವಕನನ್ನು ಚಪ್ಪಲಿಯಿಂದ ಥಳಿಸಿದ್ದಾರೆ. ಜೊತೆಗೆ ಯುವಕನ ಬಾಯಿಂದ ಜೈ ಶ್ರೀರಾಮ್ ಎಂಬ ಘೋಷಣೆಯನ್ನು ಹೇಳಿಸಿದ್ದಾರೆ.

ಇದಾದ ನಂತರ ಗ್ರಾಮದ ಹಿರಿಯರೆಲ್ಲ ಪಂಚಾಯಿತಿ ಸೇರಿ ಯುವಕನಿಗೆ ಬುದ್ಧಿವಾದ ಹೇಳಿದ್ದಾರೆ. ಮುಂದೆ ಈ ರೀತಿ ಕೋಮು ಸೌಹಾರ್ದ ಕೆದುಕುವ ಕೆಲಸ ಮಾಡಬಾರದೆಂದು ಎಚ್ಚರಿಕೆ ನೀಡಿ ವಿವಾದವನ್ನು ಅಲ್ಲಿಗೇ ಇತ್ಯರ್ಥ ಪಡಿಸಿದ್ದಾರೆ.

Related Tags:

Related Posts :

Category: