ನ್ಯೂಯಾರ್ಕ್‌ ಸಿಟಿಯ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮಮಂದಿರದ್ದೇ ಹವಾ

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ಟೈಮ್ಸ್‌ ಸ್ಕ್ವೇರ್‌ನಲ್ಲಿ ಇವತ್ತು ರಾಮಮಂದಿರದ್ದೇ ಹವಾ. ಯಾಕಂದ್ರೆ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ಇವತ್ತು ರಾಮಮಂದಿರದ ಡಿಜಿಟಲ್‌ ಚಿತ್ರ ರಾರಾಜಿಸುತ್ತಿತ್ತು.

ಹೌದು ವಿಶ್ವಪ್ರಸಿದ್ಧ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ರಾಮಮಂದಿರದ ಡಿಜಿಟಲ್‌ ಚಿತ್ರ ರಾರಾಜಿಸುತ್ತಿತ್ತು. ಅಯೋದ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು ವಿಶ್ವಾಧ್ಯಂತ ಪ್ರಸಾರವಾಗಿದೆ. ಇದು ಅಮೆರಿಕದಲ್ಲೂ ಅಲ್ಲಿನ ಭಾರತೀಯರಿಗೆ ನೇರ ಪ್ರಸಾರವಾಗಿದೆ.

ಆದ್ರೆ ಪ್ರಸಿದ್ಧ ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ಡಿಸ್‌ಪ್ಲೇ ಆಗ್ತಿರೋದು ಈಗ ಭಾರೀ ಗಮನ ಸೆಳೆದಿದೆ. ಇದಕ್ಕೆ ಕಾರಣ ಅಲ್ಲಿ ಯಾವುದೇ ಚಿತ್ರ ಅಷ್ಟು ಸುಲಭದಲ್ಲಿ ಪದರ್ಶನವಾಗುವುದಿಲ್ಲ. ಆದ್ರೆ ರಾಮಮಂದಿರದ ಚಿತ್ರ ಡಿಜಿಟಲ್‌ ರೂಪದಲ್ಲಿ ಡಿಸ್‌ಪ್ಲೇ ಆಗ್ತಿರೋದು ಇಂದಿನ ಶಿಲಾನ್ಯಾಸ ವಿಶ್ವಾದ್ಯಂತ ಎಷ್ಟೊಂದು ಮಹತ್ವ ಪಡೆದಿದೆ ಹಾಗೂ ಕುತೂಹಲ ಕೆರಳಿಸಿದೆ ಅನ್ನೋದನ್ನ ತೋರಿಸಿಕೊಡುತ್ತಿದೆ.

Related Tags:

Related Posts :

Category: