ಬ್ರೇಕ್​​ ಜಾಮ್​ ಆಗಿ ಉರುಳಿಬಿದ್ದ KSRTC ಬಸ್, ಮುಂದೇನಾಯ್ತು?

ಬಾಗಲಕೋಟೆ:ಬ್ರೇಕ್ ಲೈನರ್ ಜಾಮ್ ಆಗಿ, ಚಲಿಸುತ್ತಿದ್ದ KSRTC ಬಸ್ ಉರುಳಿ ಬಿದ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದ ಅಂಗಡಿ ಲೇಔಟ್ ಬಳಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಬಸ್ಸಿನಲ್ಲಿ ಒಟ್ಟು 20 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಬಸ್ ಕಂಡಕ್ಟರ್ ಹಾಗೂ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುನುಗುಂದ ಮಾರ್ಗವಾಗಿ ಬಳ್ಳಾರಿ ಕಡೆ ಹೊರಟಿದ್ದ KSRTC ಬಸ್​ನ ಬ್ರೇಕ್ ಲೈನರ್ ಜಾಮ್ ಆಗಿದೆ ಈ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ.

Related Tags:

Related Posts :

Category: