140 ಜನರ ಅವಿಭಕ್ತ ಕುಟುಂಬದ ಸದಸ್ಯನಿಗೆ ಸೋಂಕು, ಕೊರೊನಾ ಮಹಾಸ್ಫೋಟದ ಭೀತಿ

ಧಾರವಾಡ: ಅದೊಂದು ಆಧುನಿಕ ಬದುಕಿನ ಥಳಕುಬಳಕಿನ ನಡುವೆಯೂ ಜೊತೆಯಲಿ ಜೊತೆ ಜೊತೆಯಲಿ ಅಂತಾ ಕಷ್ಟ ಮತ್ತು ಸುಖಗಳೆರಡರಲ್ಲೂ ಜೊತೆಯಾಗಿಯೇ ಹಂಚಿಕೊಂಡು ಸಾಗುತ್ತುವಂಥ ಅವಿಭಕ್ತ ಕುಟುಂಬ. ಆದ್ರ ಈಗ ಈ ತುಂಬು ಕುಟುಂಬದ ಮೇಲೂ ಕೊರೊನಾ ಹೆಮ್ಮಾರಿಯ ಕೆಟ್ಟ ಕಾಕ ದೃಷ್ಟಿ ಬಿದ್ದಿದೆ. ಪರಿಣಾಮ ಈಗ 80 ಜನರ ಕುಟುಂಬ ಮತ್ತು 60 ಕೆಲಸಗಾರರು ಸೇರಿ 140 ಜನ ಆತಂಕದಲ್ಲಿ ಬದುಕಬೇಕಾಗಿದೆ.

140 ಜನರ ಮೇಲೆ ಜಿಲ್ಲಾಡಳಿತ ನಿಗಾ
ಹೌದು, ರಕ್ಕಸ ಕೊರೊನಾ ವೈರಸ್ ಧಾರವಾಡಕ್ಕೆ ಬಿಗ್ ಶಾಕ್ ನೀಡಿದೆ. ಧಾರವಾಡ ಜಿಲ್ಲೆಯ ಅವಿಭಕ್ತ ಕುಟುಂಬವೊಂದರ ಸದಸ್ಯನಿಗೆ ಕೊರೊನಾ ಸೋಂಕು ತಗುಲಿದೆ. ಈತನಿಂದ ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಭೀತಿ ಎದುರಾಗಿದೆ. ಯಾಕಂದ್ರ ಈ ವ್ಯಕ್ತಿಯ ಕುಟುಂಬ ಗ್ರಾಮದಲ್ಲಿಯೇ ಅತ್ಯಂತ ದೊಡ್ಡ ಕುಟುಂಬ.

ಈ ಕುಟುಂಬದವರು ಸಾಕಷ್ಟು ಪ್ರಮಾಣದಲ್ಲಿ ವಿವಿಧ ವ್ಯಾಪಾರಗಳನ್ನು ಹೊಂದಿದ್ದಾರೆ. ಜೊತೆಗೆ ಕೃಷಿ ಕೆಲಸಕ್ಕೆ ಹತ್ತಾರು ಜನರು ಇವರ ಮನೆಯಲ್ಲಿಯೇ ಇದ್ದಾರೆ.

ಹೀಗಾಗಿ ಮನೆಯ 80 ಜನರು ಮತ್ತು 60 ಜನ ಕೆಲಸಗಾರರು ಸೇರಿ 140 ಜನರ ಮೇಲೆ ಇದೀಗ ಜಿಲ್ಲಾಡಳಿತ ನಿಗಾ ಇಡೋ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಇಡೀ ಗ್ರಾಮವನ್ನ ಸೀಲ್‌ಡೌನ್ ಮಾಡಲಾಗಿದೆ.

ಆತಂಕದಲ್ಲಿ ಅವಿಭಕ್ತ ಕುಟುಂಬ
ಇನ್ನೂ ಆತಂಕಕಾರಿ ಅಂದ್ರೆ ಕೊರೊನಾ ಸೋಂಕಿತ ವ್ಯಕ್ತಿ ಒಂದು ವಾರದ ಅವಧಿಯಲ್ಲಿ ಸಾಕಷ್ಟು ಕಡೆಗಳಲ್ಲಿ ತಿರುಗಾಡಿದ್ದಾನೆ. ಸಾವಿರಾರು ಜನರ ಸಂಪರ್ಕಕ್ಕೆ ಬಂದಿದ್ದಾನೆ.

ಅಲ್ಲದೇ ಅವಿಭಕ್ತ ಕುಟುಂಬ ಆಗಿರೋದ್ರಿಂದ ಎಲ್ಲರೂ ಜೊತೆಯಾಗಿ ಇರೋದು, ಜೊತೆಯಾಗಿ ಊಟ ಮಾಡುತ್ತಾರೆ. ಹೀಗಾಗಿ ಈ ವ್ಯಕ್ತಿಯಿಂದ ಅದೆಷ್ಟು ಜನಕ್ಕೆ ಸೋಂಕು ತಗುಲಿದೆ ಅನ್ನೋ ಆತಂಕ ಮನೆ ಮಾಡಿದೆ.

ಹೀಗಾಗಿ ಈಗಾಗಲೇ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರೋ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದರೆ ಗ್ರಾಮದಲ್ಲಿ ಕೊರೊನಾ ಸ್ಪೋಟವಾಗುತ್ತಾ ಅನ್ನೋ ಭಯ ಜಿಲ್ಲೆಯಲ್ಲಿ ಕಾಡುತ್ತಿದೆ  -ನರಸಿಂಹಮೂರ್ತಿ ಪ್ಯಾಟಿ

Related Tags:

Related Posts :

Category:

error: Content is protected !!