ಸರ್ಕಾರಿ ಕಾಲೇಜ್ ಪಕ್ಕವೇ ಅಗ್ನಿ ಅವಘಡ, ಬೆಂಕಿ ಆರಿಸಲು ಅಗ್ನಿಶಾಮಕ ದಳ ಹರಸಾಹಸ

ಮೈಸೂರು: ದಿನಸಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ಮೈಸೂರಿನ ದೇವರಾಜ ಮೊಹಲ್ಲಾದ ಶಿವಯ್ಯನ ಮಠದ ರಸ್ತೆಯಲ್ಲಿ ಸಂಭವಿಸಿದೆ.

ಮೈಸೂರಿನ ದೇವರಾಜ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಅಂಗಡಿ ಹಾಗೂ ಮನೆ ನೂರು ವರ್ಷಕ್ಕೂ ಹಳೇಯದಾಗಿದೆ. ಹೀಗಾಗಿ ಕಟ್ಟಡ ದುರಸ್ತಿಗೊಳಿಸುವುದಕ್ಕಾಗಿ ನಿನ್ನೆಯಷ್ಟೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.ಆದರೂ ಅದ್ಹೇಗೋ ಅಂಗಡಿ ಸಮೇತ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಬೆಂಕಿ ಅವಘಡ ಸಂಭವಿಸಿದಾಗ ಮನೆಯಲ್ಲಿ ಯಾರು ವಾಸವಿರಲಿಲ್ಲ. ಈ ಕಟ್ಟಡದಲ್ಲಿ ಒಂದು ದಿನಸಿ ಅಂಗಡಿ, ಫ್ಲೋರ್ ಮೀಲ್ ಎರಡು ಮಳಿಗೆ ಇವೆ. ಬೆಂಕಿ ಕಾಣಿಸಿಕೊಂಡ ಕೂಡಲೇ ನಾವು ಹೊರಗಡೆ ಬಂದು ಜೀವ ರಕ್ಷಣೆ ಮಾಡಿಕೊಂಡೆವು ಎಂದು ಮನೆ ಮಾಲೀಕ ಕಣ್ಣನ್ ಹೇಳಿದ್ದಾನೆ.

ವಿಷಯ ತಿಳಿಯುತ್ತಲೇ ನಾಲ್ಕು ವಾಹನದೊಂದಿಗೆ ಸ್ಥಳಕ್ಕಾಗಮಿಸಿರುವ ಅಗ್ನಿ ಶಾಮಕ ದಳ ಸಿಬ್ಬಂದಿ. ಸತತ ಒಂದು ಗಂಟೆಯಿಂದ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದೆ.

Related Tags:

Related Posts :

Category: