ಮತ್ತೊಂದು ಶಾಕ್‌! ಹಸಿ ಮೀನು ತಿಂದ ಚೀನಾದವನಿಗೆ ಏನಾಗಿದೆ ಗೊತ್ತಾ?

ಚೀನಾ: ಕೊರೊನಾ ಹೆಮ್ಮಾರಿ ಹುಟ್ಟಿಗೆ ಚೀನಾನೇ ಕಾರಣ ಅಂತಾ ಇಡಿ ಜಗತ್ತಿಗೆ ಜಗತ್ತೇ ಅದರ ಮೇಲೆ ಮುರಿದುಕೊಂಡು ಬಿದ್ದಿದೆ. ಇದನ್ನ ಪುಷ್ಠಿಕರಿಸುವಂತೆ ಈಗ ಚೀನಾಗೆ ಮತ್ತೊಂದು ಶಾಕ್‌ ಸಿಕ್ಕಿದೆ. ಹಸಿ ಮೀನು ತಿಂದ ವ್ಯಕ್ತಿಯೊಬ್ಬ ತನ್ನ ಅರ್ಧ ಲೀವರ್‌ ಅನ್ನೇ ಕತ್ತರಿಸಿಕೊಂಡ ಘಟನೆ ಜೀನಾದ ಹಾಂಗ್‌ಜೌ ಸಿಟಿಯಲ್ಲಿ ಸಂಭವಿಸಿದೆ.

ಹೌದು ಚೀನಾದ ಹಾಂಗ್‌ಜೌ ನಗರದ ಸಮೀಪದ ವ್ಯಕ್ತಿಯೊಬ್ಬ ನಾಲ್ಕು ತಿಂಗಳ ಹಿಂದೆ ಅದೇನು ಅರ್ಜೆಂಟ್‌ ಇತ್ತೋ ಗೊತ್ತಿಲ್ಲ, ಹಸಿ ಮೀನನ್ನು ಗುಳುಂ ಮಾಡಿದ್ದಾನೆ. ಇದಾದ ನಂತರ ಹೊಟ್ಟೆ ನೋವು ಆರಂಭವಾಗಿದೆ. ಇದೇನೊ ಮಾಮೂಲಿ ನೋವು ಅಂತಾ ಹಾಗೂ ಹೀಗೂ ನಾಲ್ಕು ತಿಂಗಳು ತಳ್ಳಿದ್ದಾನೆ. ಯಾವಾಗ ನೋವು ಜಾಸ್ತಿಯಾಯಿತೋ, ಆಸ್ಪತ್ರೆಗೆ ದಾಖಲಾಗಿದ್ದಾನೆ.

ಈತನನ್ನು ಪರೀಕ್ಷಿಸಿದ ವೈದ್ಯರು ಸ್ಕ್ಯಾನ್‌ ಮಾಡಿ ನೋಡಿದ್ದಾರೆ. ಸ್ಕ್ಯಾನ್‌ನಲ್ಲಿ ಈತನ ಲೀವರ್‌ನಲ್ಲಿ ಬ್ಯಾಕ್ಟೀರಿಯಾ ಕಂಡಿವೆ. ಅಷ್ಟೇ ಅಲ್ಲ, ಮುಂದೆ ಅದೇ ಒಂದು ದೊಡ್ಡ ಹುಣ್ಣಾಗಿ ಬೆಳೆದಿದೆ. ತಕ್ಷಣ ಈತನ ಹೊಟ್ಟೆಗೆ ಆಪರೇಶನ್‌ ಮಾಡಿರುವ ವೈದ್ಯರು, ಹುಳು ಹಿಡಿದಿದ್ದ ಅರ್ಧ ಲೀವರ್‌ ಅನ್ನೇ ಕಟ್‌ ಮಾಡಿ ಹಾಕಿದ್ದಾರೆ.

ಆದ್ರೆ ಈ ಘಟನೆ ಈಗ ಮತ್ತೆ ಕೊರೊನಾ ಆರಂಭದ ನೆನಪು ತರಿಸಿದೆ. ಕೊರೊನಾದ ಹುಟ್ಟು ಕೂಡಾ ಚೀನಾದಲ್ಲಿಯೇ ಅಂದ್ರೆ ವುಹಾನ್‌ನಲ್ಲಿ ಶುರುವಾಗಿತ್ತು. ಈಗ ಹಸಿ ಮೀನು ತಿಂದು ಅರ್ಧ ಲೀವರ್‌ ಡ್ಯಾಮೇಜ್‌ ಆದ ಘಟನೆ ಮೀನುಗಳತ್ತಲೂ ಜನರು ಸಂಶಯದಿಂದ ನೋಡುವಂತಾಗಿದೆ. ಅಷ್ಟೇ ಅಲ್ಲ ಹಸಿ ಮಾಂಸ ತಿನ್ನೋರು ಒಂದು ಕ್ಷಣ ಯೋಚಿಸುವಂತೆಯೂ ಆಗಿದೆ.

 

Related Tags:

Related Posts :

Category:

error: Content is protected !!