ಕಾಪಿ ಹೊಡೆಯೋದು ಇನ್ನು 100 ವರ್ಷ ಆದ್ರೂ ನಿಲ್ಲೋಲ್ಲ ಅಂತಾ ‘ಹೇಳಿದ್ದು’ ಯಾರು!?

ಟಿವಿ9 ಕನ್ನಡ ವಾಹಿನಿಯಲ್ಲಿ ಅನಾದಿ ಕಾಲದಿಂದಲೂ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ವಿಡಂಬನಾತ್ಮಕ ಪುಟ್ಟ ಕಾರ್ಯಕ್ರಮ ಅಂದ್ರೆ ‘ನೀವು ಹೇಳಿದ್ದು-ನಾವು ಕೇಳಿದ್ದು’! ಪ್ರತಿನಿತ್ಯ ನಿರಂತರವಾಗಿ ಪ್ರಸಾರವಾಗುತ್ತಿರುವ ಈ ವಿಡಂಬನೆಯಲ್ಲಿ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ವಿಷಯಗಳೂ, ವ್ಯಕ್ತಿಗಳೂ, ಪ್ರಸಂಗಗಳ ಮೆರವಣಿಗೆ ಹಾದುಹೋಗುತ್ತವೆ. ಆದ್ರೆ ಅದಕ್ಕೊಂದು ವಿಡಂಬನಾತ್ಮಕ ಟಚ್ ಇರುತ್ತದೆ.

ಕಾಪಿ ಹೊಡೆಯೋದು ನಮ್ಮ ಆಜನ್ಮ ಸಿದ್ಧ ಹಕ್ಕು ಅನ್ನೋರೂ ಇದ್ದಾರೆ!
ಇಂದೂ ಅಷ್ಟೇ.. ಕೊರೊನಾ ಸಂಕಷ್ಟದಲ್ಲಿಯೂ SSLC ಪರೀಕ್ಷೆ ನಡೆಸುವ ಪ್ರತಿಜ್ಞೆ ತೊಟ್ಟಿರುವ ಶಿಕ್ಷಣ ಸಚಿವರು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಪರೀಕ್ಷಾ ಕೇಂದ್ರದತ್ತ ಅಪ್ಪಿತಪ್ಪಿಯೂ ಯಃಕಶ್ಚಿತ್ ಕೊರೊನಾ ಕ್ರಿಮಿ ನುಸುಳಬಾರದು, ಮಕ್ಕಳನ್ನು ಬಾಧಿಸಬಾರದು ಎಂಬುದು ಸುರೇಶ್​ಕುಮಾರ್ ಅವರ ಕಳಕಳಿ. ಹೀಗಿರುವಾಗ ಕಾಪಿ ಎಂಬ ಪಿಡುಗು ಸಹ ಈ ಬಾರಿ ನುಸುಳೋಲ್ಲ ಎಂದೇ ಪ್ರಜ್ಞಾವಂತರು ಭಾವಿಸಿದ್ದರು. ಆದ್ರೆ.. ಪರಿಸ್ಥಿತಿ ಹೇಗಾಗಿದೆ ಎಂಬುದನ್ನು ನಮ್ ಗೋಪಾಲಣ್ಣ-ಬಿಕನಾಸಿ ನಡುವಣ ಸಂಭಾಷಣೆಯಲ್ಲಿ ಕೆಳಗಿನ ವಿಡಿಯೋದಲ್ಲಿ ನೀವೇ ನೋಡಿ!

ನೀವು ಹೇಳಿದ್ದು ನಾವು ಕೇಳಿದ್ದು: ಟಿವಿ 9 ಕನ್ನಡ (28-06-2020)

Neevu Heliddu Naavu Keliddu: TV9 Kannadaನೀವು ಹೇಳಿದ್ದು ನಾವು ಕೇಳಿದ್ದು: ಟಿವಿ 9 ಕನ್ನಡ (28-06-2020)#NeevuHelidduNaavuKeliddu #Satire #TV9Kannada #Comedy #PoliticalSatire

Tv9Kannada यांनी वर पोस्ट केले शनिवार, २७ जून, २०२०

Related Posts :

Category:

error: Content is protected !!

This website uses cookies to ensure you get the best experience on our website. Learn more