ಕೊವಿಡ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: ಉಸಿರಾಡಲಾಗದೆ ಸೋಂಕಿತರ ನರಳಾಟ, ಯಾವೂರಲ್ಲಿ?

  • pruthvi Shankar
  • Published On - 19:10 PM, 22 Nov 2020

ಶಿವಮೊಗ್ಗ: ಕೊವಿಡ್ ಆಸ್ಪತ್ರೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೊರೊನಾ ಸೋಂಕಿತರು ಉಸಿರಾಡಲಾಗದೆ ನರಳಾಡಿರುವ ಘಟನೆ ಶಿವಮೊಗ್ಗದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ವಿದ್ಯುತ್ ಶಾರ್ಟ್ ಸರ್ಕಿಟ್​ ನಿಂದ ಬೆಂಕಿ ಹೊತ್ತಿದ್ದು, ಆಸ್ಪತ್ರೆ ತುಂಬೆಲ್ಲಾ ದಟ್ಟ ಹೊಗೆ ಆವರಿಸಿಕೊಂಡಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆಸ್ಪತ್ರೆಯ ತುಂಬಾ ದಟ್ಟ ಹೊಗೆ ತುಂಬಿಕೊಂಡಿದ್ದರ ಪರಿಣಾಮದಿಂದಾಗಿ ಉಸಿರಾಟ ಮಾಡಲು ಕಷ್ಟ ಪಡುತ್ತಿದ್ದ ರೋಗಿಗಳನ್ನು ರಕ್ಷಣೆ ಮಾಡಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಘಟನೆಯ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.