ಇನ್ಮುಂದೆ ಡಾಲಿ ಪಿಕ್ಚರ್ಸ್ ಜೊತೆಗೆ ಡಾಲಿ ಲಿಕ್ಕರ್ಸ್ ಕೂಡಾ ಲಭ್ಯ

ಡಾಲಿ ಎಂದೇ ಫೇಮಸ್​ ಆಗಿರುವ ನಟ ಧನಂಜಯ್ ಇತ್ತೀಚೆಗೆ ಡಾಲಿ ಪಿಕ್ಚರ್ಸ್​ ಎಂದು ತಮ್ಮ ಹೋಮ್ ಬ್ಯಾನರ್​ಗೆ ಹೆಸರಿಟ್ಟಿದ್ದರು. ಈಗ ಅದರ ಜೊತೆಗೆ ಡಾಲಿ ಲಿಕ್ಕರ್ಸ್​ ಕೂಡಾ ಪ್ರಾರಂಭವಾಗಿದೆ.

ನಟ ಶಿವರಾಜ್ ಕುಮಾರ್ ಜೊತೆ ಟಗರು ಸಿನಿಮಾದಲ್ಲಿ ಧನಂಜಯ್ ಡಾಲಿ ಪಾತ್ರ ಮಾಡಿದ್ದರು. ಈ ಪಾತ್ರ ಸಾಕಷ್ಟು ಫೇಮಸ್​ ಆಗಿ ಧನಂಜಯ್ ಡಾಲಿ ಧನಂಜಯ್ ಅಂತಲೇ ಪ್ರಖ್ಯಾತಿಯಾದ್ರು. ಇಡೀ ಸಿನಿಮಾದಲ್ಲಿ ಧನಂಜಯ್ ಬಿಯರ್ ಬಾಟಲ್ ಹಿಡಿದುಕೊಂಡಿದ್ದರು. ಇದರಿಂದಲೇ ಏನೋ ಅಭಿಮಾನಿಯೊಬ್ಬರು ತನ್ನ ಬಾರ್​ಗೆ ಡಾಲಿ ಲಿಕ್ಕರ್ಸ್​ ಎಂದು ಹೆಸರಿಟ್ಟಿದ್ದಾನೆ.

ನಾನು Daali pictures ಮಾಡ್ಕಂಡಿದ್ರೆ, ಅಭಿಮಾನಿ ದೇವರು ಯಾರೊ Daali liquors ಮಾಡ್ಕಂಡವ್ರೆ. ಒಳ್ಳೇದಾಗಲಿ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವನ್ನು ಧನಂಜಯ್​ ಶೇರ್ ಮಾಡಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!