ಧನ್ವೀರ್​ ಸಫಾರಿ ಇದೇ ಮೊದಲಲ್ಲ.. ಈ ಹಿಂದೆಯೂ ಆನೆ ಮೇಲೆ ಕೂತು ಪೋಸ್ ಕೊಟ್ಟಿದ್ದ ನಟ

  • KUSHAL V
  • Published On - 12:54 PM, 23 Oct 2020

ಮೈಸೂರು: ಸ್ಯಾಂಡಲ್​ವುಡ್​ ನಟ ಧನ್ವೀರ್​ ರಾತ್ರಿ ಸಫಾರಿ ಇದೇ ಮೊದಲಲ್ಲ.. ನಟ ಈ ಹಿಂದೆಯೂ ಆನೆ ಮೇಲೆ ಕುಳಿತು ಕ್ಯಾಮಾರಾಗೆ ಪೋಸ್ ಮಾಡಿರುವ ವಿಡಿಯೋ ಸಹ ಲಭ್ಯವಾಗಿದೆ. ಈ ಹಿಂದೆ, ಜಿಲ್ಲೆಯ ನಾಗರಹೊಳೆಯಲ್ಲಿರುವ ಮತ್ತಿಗೂಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದ ಧನ್ವೀರ್​ ಆನೆ ಮೇಲೆ ಕುಳಿತು ಪೋಸ್ ನೀಡಿರುವ ವಿಡಿಯೋ ಒಂದು ಇದೀಗ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 27ರಂದು ಮತ್ತಿಗೂಡು ಶಿಬಿರಕ್ಕೆ ಭೇಟಿ ನೀಡಿದ್ದ ವಿಡಿಯೋವನ್ನು ಧನ್ವೀರ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಅಂದ ಹಾಗೆ, ಆನೆ ಮೇಲೆ ಕುಳಿತುಕೊಳ್ಳುವುದ್ದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆದಿರಬೇಕು. ಇದಲ್ಲದೆ, ಈ ನಡುವೆ ಸಿನಿಮಾಗಳಲ್ಲೂ ಅರಣ್ಯ ಇಲಾಖೆ ಆನೆ ಮೇಲೆ ಕೂರಲು ಅವಕಾಶ ನೀಡುತ್ತಿಲ್ಲ . ಜೊತೆಗೆ, ಮಾವುತ ಬಿಟ್ಟರೆ ಆನೆ ಮೇಲೆ ಬೇರೆಯವರು ಕೂರುವಂತಿಲ್ಲ ಎಂಬ ನಿಯಮವಿದೆ.
ಆದರೂ, ಆನೆ ಮೇಲೆ ಕೂತು ನಟ ಪೋಸ್ ನೀಡಿದ್ದು ಶಿಬಿರಕ್ಕೆ ಭೇಟಿ ನೀಡಿದಾಗ ನಟ ಧನ್ವೀರ್ ಅನುಮತಿ ಪಡೆದಿದ್ರಾ? ಧನ್ವೀರ್​ಗೆ ಅನುಮತಿ ನೀಡಿದ ಅಧಿಕಾರಿ ಯಾರು? ಎಂಬ ಪ್ರಶ್ನೆಗಳು ಕೇಳಿಬಂದಿದೆ.