ಧ್ರುವ ಸರ್ಜಾ-ಪತ್ನಿ ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು: ನಿನ್ನೆ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಬಗ್ಗೆ ಖುದ್ದು ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಈಗ ಆಸ್ಪತ್ರೆಯಿಂದ ನಟ ಧ್ರುವ ಸರ್ಜಾ, ಪ್ರೇರಣಾ ಡಿಸ್ಚಾರ್ಜ್ ಆಗಿದ್ದಾರೆ.

1 ದಿನ ಆಸ್ಪತ್ರೆಲಿದ್ದು ಚಿಕಿತ್ಸೆ ಪಡೆದು ನಿನ್ನೆ ಸಂಜೆ ಮನೆಗೆ ವಾಪಸ್ ಆಗಿದ್ದಾರೆ. ಸರ್ಜಾ ಕುಟುಂಬಕ್ಕೆ ಆತಂಕ ದೂರವಾಗಿದೆ. ಕೊವಿಡ್ ಪಾಸಿಟಿವ್ ಬಂದಿದ್ದ ಕಾರಣ ಮೊನ್ನೆ ಆಸ್ಪತ್ರೆಗೆ ದಾಖಲಾಗಿದ್ದರು.

ಸಣ್ಣಪುಟ್ಟ ಜ್ವರ ಬಿಟ್ಟರೆ ಬೇರೆ ಲಕ್ಷಣಗಳು ಇರದ ಹಿನ್ನೆಲೆಯಲ್ಲಿ ಧ್ರುವ ಮತ್ತು ಪ್ರೇರಣಾ ಇಬ್ಬರನ್ನೂ ಮನೆಯಲ್ಲಿಯೇ ಕ್ವಾರಂಟೈನ್ ಆಗಲು ಸೂಚಿಸಿದ್ದಾರೆ. ಸದ್ಯ ಈಗ ಯೋಗ, ಧ್ಯಾನ, ವ್ಯಾಯಾಮ ಮಾಡಿಕೊಂಡು ಇಬ್ಬರು ಆರಾಮಾಗಿದ್ದಾರೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಇನ್ನೂ ಧ್ರುವ ಸಂಪರ್ಕದಲ್ಲಿ ಯಾರೂ ಇರಲಿಲ್ಲ. ಕೇವಲ ಆಪ್ತರಾದ ಮುತ್ತು ಮಾತ್ರ ಇದ್ರು. ಮೇಘನಾ ಸರ್ಜಾ ಬೇರೆ ಮನೆಯಲ್ಲಿದ್ದರಿಂದ ಅವರು ಆರಾಮಾಗಿದ್ದಾರೆ.

Related Tags:

Related Posts :

Category:

error: Content is protected !!