ಕೊರೊನಾ ಸಂಕಷ್ಟದಲ್ಲಿರೋ ಸ್ಯಾಂಡಲ್‌ವುಡ್‌ಗೆ ಶಿವಣ್ಣನೇ.. ದಿ ಲೀಡರ್!

ಬೆಂಗಳೂರು: ಕೊರೊನಾ ಹೆಮ್ಮಾರಿಯಿಂದಾಗಿ ರಾಜ್ಯ ಸಂಕಷ್ಟದಲ್ಲಿದೆ. ಹೀಗಾಗಿ ಕೆಲವೊಂದು ಉದ್ಯಮಗಳಿಗೆ ರಾಜ್ಯ ಸರ್ಕಾರ ಕೆಲ ಪ್ಯಾಕೆಜ್‌ಗಳನ್ನ ಘೋಷಿಸಿದೆ. ಆದ್ರೆ ಚಿತ್ರರಂಗದತ್ತ ಕಣ್ಣೆತ್ತಿಯೂ ನೋಡಿಲ್ಲ. ಹೀಗಾಗಿ ಈ ಕುರಿತು ಚರ್ಚಿಸಲು ಶಿವರಾಜ್‌ ಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ಸಭೆ ಸೇರುತ್ತಿದ್ದಾರೆ.

ಹೌದು ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಸಂಕಷ್ಟ ಎದುರಿಸಲು ವಿವಿಧ ರಂಗಗಳಿಗೆ ಕೆಲ ಪ್ಯಾಕೆಜ್‌ ಘೋಷಿಸಿದ್ದಾರೆ. ಆದ್ರೆ ಸ್ಯಾಂಡಲ್‌ವುಡ್‌ಗೆ ಯಾವುದೇ ಪರಿಹಾರವಾಗಲಿ ಪ್ಯಾಕೆಜ್‌ಗಳನ್ನಾಗಲಿ ಪ್ರಕಟಿಸಿಲ್ಲ. ಹೀಗಾಗಿ ನಿರಾಶೆಗೊಂಡಿರುವ ಚಿತ್ರರಂಗದ ಗಣ್ಯರು ಈ ಬಗ್ಗೆ ಚರ್ಚಿಸಲು ನಟ ಶಿವರಾಜ್‌ಕುಮಾರ್‌ ಅವರ ಮನೆಯಲ್ಲಿ ಸಭೆ ಸೇರುತ್ತಿದ್ದಾರೆ.

ಈ ಸಭೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಅದರ ಸಂಸ್ಥೆಗಳು ಕೂಡಾ ಸಭೆಯಲ್ಲಿ ಭಾಗಿಯಾಗಲಿವೆ. ಸಭೆಯಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಚರ್ಚಿಯಾಗಲಿದೆ.

ಸಭೆಯ ನಂತರ ಶಿವರಾಜ್ ಕುಮಾರ್ ಅವರ ನೇತೃತ್ವದಲ್ಲಿ ಚಿತ್ರರಂಗದ ಪ್ರಮುಖರು ಮುಖ್ಯಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆಗಳನ್ನ ಅವರ ಗಮನಕ್ಕೆ ತರಲಿದ್ದಾರೆ. ಹಾಗೇನೆ ಸರ್ಕಾರದಿಂದ ಕೆಲ ಪ್ಯಾಕೆಜ್‌ಗಳಿಗೆ ಬೇಡಿಕೆಯಿಡಲಿದ್ದಾರೆ. ಅಂಬರೀಷ್‌ ನಿಧನದ ನಂತರ ಇದೇ ಮೊದಲ ಬಾರಿಗೆ ಚಿತ್ರರಂಗದ ಪ್ರಮುಖರು ಸಭೆ ಸೇರುತ್ತಿದ್ದು, ಇದಕ್ಕೆ ಶಿವರಾಜ್‌ಕುಮಾರ್‌ ನೇತೃತ್ವ ವಹಿಸುತ್ತಿರೋದು ವಿಶೇಷ.

Related Tags:

Related Posts :

Category:

error: Content is protected !!