ಐಂದ್ರಿತಾಗೂ ಇದಿಯಾ ಡ್ರಗ್ಸ್ ನಂಟು.. ನಟಿಗೆ ಫಾಜಿಲ್ ಪರಿಚಯ ಹೇಗಾಯ್ತು?

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ನಶೆಯ ಗಾಳಿ ಹರಿದಾಡುತ್ತಿದೆ. ಈ ಡ್ರಗ್ಸ್ ಜಾಲದಲ್ಲಿ ಈಗಾಗಲೇ ಇಬ್ಬರು ನಟಿಮಣಿಯರು ಸಿಕ್ಕಿಬಿದ್ದಿದ್ದಾರೆ. ಈಗ ನಟಿ ಐಂದ್ರಿತಾಳ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿ ಬಂದಿದ್ದು, ಸಿಸಿಬಿ ನೋಟಿಸ್ ನೀಡಿದೆ.  ಅಚ್ಚರಿಯ ವಿಷಯ ಅಂದ್ರೆ ನಟಿ ಐಂದ್ರಿತಾಗೆ ಶೇಖ್ ಫಾಜಿಲ್ ಪರಿಚಯವಿದೆಯಂತೆ. ಹಾಗಿದ್ರೆ ಪರಿಚಯ ಹೇಗಾಯ್ತು ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ.

ಮೈ ಜರೂರ್ ಆವುಂಗಾ..
ಐಂದ್ರಿತಾ ರೇ ಮೈ ಜರೂರ್ ಆವುಂಗಾ ಚಿತ್ರದ ಪ್ರಚಾರದ ಸಮಯದಲ್ಲಿ 2017ರಲ್ಲಿ ಶೇಖ್ ಫಾಜಿಲ್ ಭೇಟಿಯಾಗಿದ್ದರ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಮೈ ಜರೂರ್ ಆವುಂಗಾ ಆ್ಯಂಡಿ ಮೊದಲ ಬಾಲಿವುಡ್ ಸಿನಿಮಾ. ಚಿತ್ರದ ನಾಯಕ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್. ಹೀಗಾಗಿ ಅರ್ಬಾಜ್ ಮೂಲಕ ಆಂಡಿಗೆ ಶೇಖ್ ಫಾಜಿಲ್ ಪರಿಚಯವಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಅರ್ಬಾಜ್ ಖಾನ್ ಮತ್ತು ಶೇಖ್ ಫಾಜಿಲ್ ಇಬ್ಬರೂ ಗೆಳೆಯರಾಗಿದ್ದಾರೆ.

ಅದೇ ವರ್ಷ ಅರ್ಬಾಜ್, ಆ್ಯಂಡಿ ಶ್ರೀಲಂಕಾಗೂ ತೆರಳಿದ್ದರು. ಶ್ರೀಲಂಕಾದ ಕೊಲೊಂಬೊದಲ್ಲಿರುವ ಶೇಖ್ ಫಾಜಿಲ್ ಒಡೆತನದ ಬಾಲೀಸ್ ಕೆಸಿನೋದಲ್ಲಿ ವಾಸ್ತವ್ಯ ಸಹ ಹೂಡಿದ್ರು. ಆ ಬಳಿಕ ಐಂದ್ರಿತಾ ಬೆಂಗಳೂರು ಸೇರಿದಂತೆ ಅನೇಕ ಕಡೆ ಹಲವು ಬಾರಿ ಶೇಖ್ ಫಾಜಿಲ್ ಭೇಟಿಯಾಗಿದ್ದರು.

ಶೇಖ್ ಫಾಜಿಲ್, ಐಂದ್ರಿತಾ, ಅರ್ಬಾಜ್, ಸಂಜನಾ, ಸೋನು ಸೂದ್ , ಗುಲ್ಶನ್ ಗ್ರೋವರ್, ಸೊಹೈಲ್ ಖಾನ್ ಪಾರ್ಟಿ ಮಾಡಿದ್ದರು. ಈ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜಾಗಿತ್ತಾ? ಹಲವು ಬಾರಿ ಶ್ರೀಲಂಕಾ, ಬೆಂಗಳೂರಿನಲ್ಲಿ ಶೇಖ್ ಫಾಜಿಲ್ ಭೇಟಿಯಾಗಲು ಕಾರಣವೇನು? ಹೀಗೆ ಐಂದ್ರಿತಾಗೆ ಹಲವು ಪ್ರಶ್ನೆಗಳನ್ನು ಸಿಸಿಬಿ ಅಧಿಕಾರಿಗಳು ಇಂದು ಕೇಳಲಿದ್ದಾರೆ.

Related Tags:

Related Posts :

Category: