2014ರಲ್ಲೇ ಟುಮಾರೋಲ್ಯಾಂಡ್​ಗೆ ಪಾದಾರ್ಪಣೆ ಮಾಡಿದ್ದ ‘ಪಾರ್ಟಿ ಅನಿಮಲ್’ ಐಂದ್ರಿತಾ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ಯೂಟ್ ಜೋಡಿ ಐಂದ್ರಿತಾ ಹಾಗೂ ದಿಗಂತ್​ಗೆ ಇಂದು 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ. ಹಾಗಿದ್ರೆ ಈ ಕ್ಯೂಟ್ ಜೋಡಿಗೂ ನಶೆಯ ನಂಟಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಬೆಲ್ಜಿಯಂನಲ್ಲಿ ಪ್ರತಿ ವರ್ಷ ನಡೆಯುತ್ತೆ Tomorrowland Festival ..
ನಟಿ ಐಂದ್ರಿತಾಗೆ ಪಾರ್ಟಿ ಪ್ರೇಮ ಹೆಚ್ಚಾಗಿತ್ತಂತೆ. ಪಾರ್ಟಿ ಪ್ರೇಮವೇ ಕಂಟಕವಾಗುತ್ತಾ? ಎಂಬಂತಾಗಿದೆ. 2014ರಲ್ಲೇ ಟುಮಾರೋಲ್ಯಾಂಡ್​ಗೆ ಹೋಗಿದ್ದ ಆ್ಯಂಡಿ ಅಲ್ಲಿನ ಪಾರ್ಟಿಯಲ್ಲಿ ಭಾಗಿಯಾಗಿದ್ರು. ಇದು ಬೆಲ್ಜಿಯಂನಲ್ಲಿ ಪ್ರತಿ ವರ್ಷ ನಡೆಯುವ ಮ್ಯೂಸಿಕ್ ಫೆಸ್ಟಿವಲ್, ಅಲ್ಲಿ ಗಾಂಜಾ ಸೇವನೆಗೆ ಕಾನೂನಿನ ಅಡ್ಡಿಯಿಲ್ಲ.

ಆದರೆ ಬೇರೆ ರೀತಿಯ ಮಾದಕವಸ್ತುಗಳು ಅಲ್ಲಿ ಬ್ಯಾನ್. ಡ್ರಗ್ ಓವರ್ಡೋಸ್​ನಿಂದ ಸಾವಿಗೀಡಾದ ಘಟನೆಗಳೂ ನಡೆದಿವೆ ಅನ್ನೋ ಮಾಹಿತಿ ಇದೆ. ಹೀಗಾಗಿ ಈಗ ಸಿಸಿಬಿ ಕಣ್ಣು ಮನಸಾರೆ ಜೋಡಿ ಮೇಲೆ ಬಿದ್ದಿದೆ. ಮುಂದೆ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತೆ ಏನೆಲ್ಲ ಬೆಳವಣಿಗೆಗಳಾಗುತ್ತೆ ಕಾದು ನೋಡಬೇಕಿದೆ.

Related Tags:

Related Posts :

Category: