ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಸೆಮಣೆ ಏರಿದ ನಟಿ ಮಯೂರಿ, ದಿಢೀರನೆ ಮದುವೆ ನಡೆಯಿತು!

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ನಟಿ ಮಯೂರಿ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ. ಜೆಪಿ ನಗರದ ತಿರುಮಲ ದೇವಸ್ಥಾನದಲ್ಲಿ ಬೆಳಗಿನ ಜಾವ 2.30 ರಿಂದ 3 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಹಸೆಮಣೆ ಏರಿ ತನ್ನ ಬಾಲ್ಯದ ಗೆಳೆಯ ಅರುಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಮಯೂರಿ ಮತ್ತು ಯುಎಸ್ಎ ಯಲ್ಲಿ ಸೆಟಲ್ ಆಗಿರುವ ಅರುಣ್ ಇಬ್ಬರು ಸುಮಾರು 10 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಮಯೂರಿ ಬಣ್ಣದ ಲೋಕದ ಆರಂಭದಿಂದಲೂ ಅರುಣ್ ಜೊತೆ ನಡೆದಿದ್ದಾರೆ. ಸದ್ಯ ಅರುಣ್ ಬಿಸಿನೆಸ್ ಮ್ಯಾನ್ ಆಗಿದ್ದು ಇಬ್ಬರು ಬಾಲ್ಯ ಸ್ನೇಹಿತರು.

ಕೃಷ್ಣ ಲೀಲಾ ..ನನ್ನ ಪ್ರಕಾರ, ಮೌನಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಯೂರಿ ನಟಿಸಿದ್ದಾರೆ. ಕುಟುಂಬ ಸದಸ್ಯರು ಹಾಗು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಅರುಣ್ ತಂದೆ ತಾಯಿಗೆ ಹುಶಾರಿರಲಿಲ್ಲ. ನಮ್ಮ ಸಹೋದರಿ ವಿದೇಶಕ್ಕೆ ಹೋಗಬೇಕು ಹೀಗಾಗಿ ಅರ್ಜೆಂಟ್​ನಲ್ಲಿ ಮದುವೆ ಆಗಿದ್ದೀನಿ ಎಂದು ಮಯೂರಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!