ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ ನಟಿ ಪ್ರಣೀತಾ

ರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನಟಿ ಪ್ರಣೀತಾ ನೀಡಿದ್ದಾರೆ. ಆ ಮೂಲಕ, ರಾಮ ಮಂದಿರ ನಿರ್ಮಾಣ ಧನಸಹಾಯಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.

  • TV9 Web Team
  • Published On - 19:26 PM, 12 Jan 2021
ನಟಿ ಪ್ರಣೀತಾ ಸುಭಾಷ್ ಹಾಗೂ ರಾಮ ಮಂದಿರದ ನೀಲ ನಕಾಶೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಟಿ ಪ್ರಣೀತಾ ಸುಭಾಷ್ ₹ 1 ಲಕ್ಷ ದೇಣಿಗೆ ನೀಡಿದ್ದಾರೆ. ಆ ಮೂಲಕ, ರಾಮ ಮಂದಿರ ನಿರ್ಮಾಣ ಧನಸಹಾಯಕ್ಕೆ ಕೈ ಜೋಡಿಸುವಂತೆ ಪ್ರಣೀತಾ ಸುಭಾಷ್ ಮನವಿ ಮಾಡಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ದೇಣಿಗೆ ನೀಡಿದ್ದಾರೆ.

ಮೂಲತಃ ಕನ್ನಡ ನಟಿಯಾಗಿರುವ ಪ್ರಣೀತಾ, ತೆಲುಗು, ತಮಿಳು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. 2010ರಲ್ಲಿ ಪೊರ್ಕಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಪ್ರಣೀತಾ, ಬಳಿಕ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.

Fact Check | ‘ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರ’ ವೈರಲ್ ಫೋಟೊ ವಾರಣಾಸಿಯದ್ದು