ಗಂಟೆಗಟ್ಟಲೆ ಗೇಟ್ ಮುಂದೆ ಕಾದ್ರೂ ದಾಖಲಿಸಿಕೊಂಡಿಲ್ಲ, ಅಪೋಲೋ ವಿರುದ್ಧ ನಟಿ ಗರಂ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿಗೂ ಖಾಸಗಿ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿತನದ ನಡೆ ಆಕ್ರೋಶ ಬರುವಂತೆ ಮಾಡಿದೆ. ಅಪೋಲೋ ಆಸ್ಪತ್ರೆ ವಿರುದ್ಧ ನಟಿ ಸುಧಾರಾಣಿ ಗರಂ ಆಗಿದ್ದಾರೆ. ತಡ ರಾತ್ರಿ 10 ಗಂಟೆ ಯಿಂದ 11 ಗಂಟೆವರೆಗೂ ಅಂದರೆ ಸುಮಾರು ಒಂದು ಗಂಟೆಗಳ ಕಾಲ ಗೇಟ್​ಯಿಂದ ಹೊರ ನಿಲ್ಲಿಸಿ ನಟಿ ಸುಧಾರಾಣಿಗೆ ಅಪೋಲೊ ಆಸ್ಪತ್ರೆ ಸಿಬ್ಬಂದಿ ಆಟವಾಡಿಸಿದ್ದಾರೆ.

ನಿನ್ನೆ ತಡರಾತ್ರಿ ಸುಧಾರಾಣಿ ಅಣ್ಣನ ಪುತ್ರಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದಾಗಿ ತಲೆ ಸುತ್ತಿ ಬಿದ್ದಿದ್ದರು. ಹೀಗಾಗಿ ನಟಿ ಸುಧಾರಾಣಿ ತನ್ನ ಸಹೋದರನ ಪುತ್ರಿಯನ್ನು ಕರೆದುಕೊಂಡು ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಆ್ಯಂಬುಲೆನ್ಸ್​ನಲ್ಲಿ ಬಂದಿದ್ದಾರೆ.‌ ಈ ವೇಳೆ ಆಸ್ಪತ್ರೆಯವರು ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಇಲ್ಲ ಅಂತ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಇದರಿಂದ ಬೇಸತ್ತು ಕೊನೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಬಳಿಕ ಆಸ್ಪತ್ರೆ ಒಳಗೆ ದಾಖಲಾತಿ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಸುಧಾರಾಣಿ ಅಪೋಲೋ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವೈದ್ಯರು ದೇವರ ಸಮಾನ ಅಂತೀವಿ ಆದ್ರೆ ಇಲ್ಲಿ‌‌ನ ಪರಿಸ್ಥಿತಿಯೇ ಬೇರೆ ಇದೆ.‌ ನಮ್ಮನ್ನು ರಾತ್ರಿ 10 ಗಂಟೆಯಿಂದ ಹೊರ ನಿಲ್ಲಿಸಿದ್ರು. ಕಮಿಷನರ್​ಗೆ ಫೋನ್ ಮಾಡಿದ ಬಳಿಕ ಒಳಗೆ ಸೇರಿಸಿಕೊಂಡಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.

Related Tags:

Related Posts :

Category:

error: Content is protected !!