ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ: ಆಳ್ವ ಕುಟುಂಬಸ್ಥರ ದುಃಖ

ಬೆಂಗಳೂರು: ಆದಿತ್ಯ ಆಳ್ವಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಕುಟುಂಬಸ್ಥರು ಹೇಳಿದ್ದಾರೆ.
A6 ಆದಿತ್ಯ ಆಳ್ವ ಹೈ-ಫೈ ಜೀವನ ನಡೆಸುತ್ತಿದ್ದ. ಆದಿತ್ಯ ರಾತ್ರಿಯೆಲ್ಲಾ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ತನ್ನ ಹೌಸ್ ಆಫ್ ಲೈಫ್‌ ರೆಸಾರ್ಟ್​ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡ್ತಿದ್ದ. ಆತನ ಜೀವನ ಶೈಲಿಯಿಂದಲೇ CCB ದಾಳಿ ನಡೆಸಿದೆ ಅಂತಾನೂ ಆದಿತ್ಯ ಆಳ್ವಾ ವಿರುದ್ಧ ಆತನ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಅವನಿಗಿಲ್ಲ:
ಆದಿತ್ಯನ ಚಟಗಳಿಂದಲೇ ನಾವು ಕುಟುಂಬಸ್ಥರು ದೂರವಾಗಿದ್ದೇವೆ ಎಂದಿರುವ ಜೀವರಾಜ್ ಆಳ್ವ ಕುಟುಂಬಸ್ಥರು, ತಾನು ಜೀವರಾಜ್ ಆಳ್ವಾರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ. ಫಾರ್ಮ್‌ಹೌಸ್ ಮಾಡುವುದಕ್ಕೆ ನಾಲ್ಕು ಎಕ್ರೆ ಜಾಗ ಖರೀದಿಸಿದ್ದರು. ಆದರೆ ಆ ಜಾಗದಲ್ಲಿ ಆದಿತ್ಯ ರೆಸಾರ್ಟ್ ಮಾಡಿಕೊಂಡಿದ್ದಾನೆ. ರೆಸಾರ್ಟ್‌ನಲ್ಲಿ ಅಕ್ರಮ ಚಟುವಟಿಕೆ ನಡೆಸ್ತಿದ್ದ ಬಗ್ಗೆ ನಮಗೆ ಬೇಸರ ಸಹ ಇದೆ ಎಂದು ಟಿವಿ9ಗೆ ದಿವಂಗತ ಜೀವರಾಜ್ ಆಳ್ವ ಕುಟುಂಬ ಸದಸ್ಯರು ಹೇಳಿದ್ದಾರೆ.

Related Tags:

Related Posts :

Category: