BREAKING NEWS
India vs Australia, 2nd ODI, LIVE Score: ಫಿಂಚ್-ವಾರ್ನರ್ ಭರ್ಜರಿ ಜೊತೆಯಾಟ

ಲಾಕ್​ಡೌನ್ ಬಳಿಕ ಮೊದಲ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ, ಇಂದು ಆಸ್ಟ್ರೇಲಿಯಾ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡಿರುವ ಭಾರತಕ್ಕೆ ಇಂದಿನ ಆಟವನ್ನು ಗೆಲ್ಲಲೇಬೇಕಾದ ಒತ್ತಡವಿದೆ‌. ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಇರುವ ಭಾರತವು, ಸರಣಿ ಸಮಬಲ ಕಾಯ್ದುಕೊಳ್ಳಲು ಹೋರಾಡಬೇಕಿದೆ. ಗೆಲ್ಲುವ ಉತ್ಸಾಹದಲ್ಲಿ ಕೊಹ್ಲಿ-ಫಿಂಚ್ ಪಡೆ! ಮೊದಲ ಪಂದ್ಯದ ತಪ್ಪುಗಳನ್ನು ಮತ್ತೆ ಮರುಕಳಿಸದೆ, ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿ ಕೊಹ್ಲಿ

x

ಶ್ರೀರಾಮನ ಪರವಾಗಿ ವಾದಿಸಿದ್ದ ಕೆ.ಎನ್. ಭಟ್​ಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ

  • sadhu srinath
  • Published On - 13:46 PM, 28 Oct 2020

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿರುವ ಹಲವಾರು ಸಾಧಕರ ಮಧ್ಯೆ ಇರುವ ಒಬ್ಬ ವಿಜೇತರ ಸಾಧನೆ ವಿಶಿಷ್ಟ ಮತ್ತು ಅಪರೂಪದ್ದಾಗಿದೆ. ಅವರೇ ವಕೀಲ ಕೆ.ಎನ್. ಭಟ್. ಅವರದ್ದು ವಿಶಿಷ್ಟ ಸೇವಾನುಭವ. ನ್ಯಾಯಾಲಯದಲ್ಲಿ ಸಾವಿರಾರು ಕಕ್ಷಿದಾರರ ಪರವಾಗಿ ವಾದಿಸಿ ಯಶಸ್ವಿ ವಕೀಲರಾಗಿ ಮತ್ತು ಕಾನೂನು ಪಂಡಿತರೆಂದು ಹೆಸರುವಾಸಿಯಾದವರು. ಸದ್ಯ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಭಟ್ ಅವರ ಕಕ್ಷಿದಾರರ ಪಟ್ಟಿಯಲ್ಲಿ ಅಯೋಧ್ಯೆಯ ಶ್ರೀರಾಮನೂ ಬರುತ್ತಾನೆ! ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು.

ಅದು ಹೇಗೆ?
ರಾಮ ಜನ್ಮಭೂಮಿ ಕೇಸ್ ಅಲಹಾಬಾದ್ ಹೈ ಕೋರ್ಟನಲ್ಲಿ ನಡೆಯುತ್ತಿದ್ದಾಗ, ಕೋರ್ಟೇ ಖುದ್ದಾಗಿ ಭಟ್ ಅವರನ್ನು ಶ್ರೀರಾಮನ ಪರವಾಗಿ ವಾದಿಸಲು ಕೇಳಿತ್ತು. ಈ ಸಂಬಂಧ ಕೆಲಸ ಪ್ರಾರಂಭಿಸಿದ ಭಟ್ ಅವರು ಬೇರೆ ಬೇರೆ ಜನರನ್ನು ಭೇಟಿ ಮಾಡಿ ಅಪರೂಪದ ದಾಖಲೆಗಳನ್ನು ಕಲೆ ಹಾಕಿ ಕೋರ್ಟಿಗೆ ಸಲ್ಲಿಸಿದ್ದಷ್ಟೇ ಅಲ್ಲ, ಮೂರು ವರ್ಷ ತಮ್ಮ ವಾದವನ್ನು ಯಶಸ್ವಿಯಾಗಿ ಮಂಡಿಸಿದರು.

ಅಲಹಾಬಾದ್ ಹೈಕೋರ್ಟ ತೀರ್ಪು 2010 ರಲ್ಲಿ ಹೊರಬಿದ್ದಿತ್ತು. ಅದಾದ ನಂತರ ಬಂದ ಸುಪ್ರೀಂ ಕೋರ್ಟ ತೀರ್ಪಿನಲ್ಲಿ, ಶ್ರೀರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ ಬಗ್ಗೆ ಸಾಕ್ಷ್ಯಾಧಾರ ಇದೆ ಎಂದು ಹೇಳಿದ್ದು ಭಟ್ ಅವರ ವೃತ್ತಿಪರತೆ ಮತ್ತು ಕೌಶಲ್ಯವನ್ನು ಎತ್ತಿ ಹಿಡಿದಿತ್ತು.

1940 ರಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಹುಟ್ಟಿದ ಭಟ್ ಅವರು 1962 ದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. 1986 ರಲ್ಲಿ ಸುಪ್ರೀಂ ಕೋರ್ಟ್​ ಅವರನ್ನು ಹಿರಿಯ ನ್ಯಾಯವಾದಿಯಾಗಿ ಗೌರವಿಸಿದೆ. 1996 ರಲ್ಲಿ ಅವರನ್ನು ಕೇಂದ್ರ ಸರಕಾರ ಅಡಿಶನಲ್ ಸಾಲಿಸಿಟರ್ ಜನರಲ್ ಆಗಿ ನೇಮಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಈ ಬಾರಿ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪುರಸ್ಕೃತರ ಪಟ್ಟಿ ಇಲ್ಲಿದೆ