ದಶಕದ ಬಳಿಕ ಮರಳಿದ ಮಾಜಿ ವಿಶ್ವಸುಂದರಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸುಷ್ಮಿತಾ

ಬಾಲಿವುಡ್​ನ ಪ್ರತಿಭಾನ್ವಿತಾ ನಟಿ ಸುಷ್ಮಿತಾ ಸೇನ್​. ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಗ್ಲ್ಯಾಮರಸ್​ ಗೊಂಬೆ ಅಂತಲೇ ಕರೆಸಿಕೊಳ್ತಿದ್ದ ಸುಷ್ಮಿತಾ ಸೇನ್​ ಇದ್ದಕ್ಕಿದ್ದ ಹಾಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳೋದನ್ನ ಕಡಿಮೆ ಮಾಡಿ ಬಿಟ್ರು.

ಅಭಿಮಾನಿಗಳಿಗೆ ಸಿಹಿ ಸುದ್ದಿ:
ಬೆಳ್ಳಿ ತೆರೆ ಮೇಲೆ ಸುಷ್ಮಿತಾರನ್ನ ಮಿಸ್​ ಮಾಡಿಕೊಳ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಸುಷ್ಮಿತಾ. ಅದುವೇ ಸುಷ್ಮಿತಾ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸ್ತಾರೆ ಅನ್ನೋದು. ಹೌದು, ಸುಷ್ಮಿತಾ ಸೇನ್​ ಸಿನಿಮಾರಂಗದಲ್ಲಿ ತಮ್ಮ ಎರಡನೇ ಇನ್ನಿಂಗ್​ ಶುರುಮಾಡೋಕೆ ಸಜ್ಜಾಗಿದ್ದಾರೆ. ತಾವು ಸಿನಿಮಾರಂಗಕ್ಕೆ ಮರಳುತ್ತಿರೋ ವಿಚಾರವನ್ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಫೊಟೋವೊಂದನ್ನ ಅಪ್ಲೋಡ್​ ಮಾಡಿರೋ ನಟಿ ಸುಷ್ಮಿತಾ, ತಾನು ಅಭಿನಯಕ್ಕೆ ಮರಳುತ್ತಿರೋ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಜೊತೆಗೆ ತಾನು ಸಿನಿಮಾರಂಗಕ್ಕೆ ಕಮ್​ಬ್ಯಾಕ್​ ಮಾಡ್ತಿರೋದು ಕೇವಲ ಅಭಿಮಾನಿಗಳಿಗಾಗಿ ಅಂತಲೂ ಬರೆದುಕೊಂಡಿದ್ದಾರೆ.

ವಿಶ್ವಸುಂದರಿ ಕಿರೀಟವನ್ನ ಮುಡಿಗೇರಿಸಿಕೊಂಡ ಬಳಿಕ, ಬಾಲಿವುಡ್​ನಲ್ಲಿ ಬಿವಿ ನಂಬರ್​1, ಮೈ ಹೂನಾ, ಮೈನೇ ಪ್ಯಾರ್​ ಕಿಯಾದಂತಹ ಸಾಲು ಸಾಲು ಹಿಟ್​ ಸಿನಿಮಾಗಳನ್ನ ಸುಷ್ಮಿತಾ ಸೇನ್ ಕೊಟ್ಟಿದ್ದರು. ಆದ್ರೆ, 2010ರಲ್ಲಿ ತೆರೆಕಂಡ ನೋ ಪ್ರಾಬ್ಲಂ ಸಿನಿಮಾದ ನಂತ್ರ, ಸುಷ್ಮಿತಾ ಮತ್ತೆ ನಾಯಕಿ ಆಗಿ ಬಿಟೌನ್​ನಲ್ಲಿ ಕಾಣಿಸಿಕೊಳ್ಳಲಿಲ್ಲ.

10 ವರ್ಷಗಳ ಬಳಿಕ ಸುಷ್ಮಿತಾ ಸೆನ್​ ಕಮ್​ಬ್ಯಾಕ್:
ಈಗ ಮತ್ತೆ ಸಿನಿಮಾರಂಗಕ್ಕೆ ರೀಎಂಟ್ರಿ ಕೊಡ್ತಿರೋ ವಿಚಾರವನ್ನ ಹಂಚಿಕೊಂಡಿದ್ದಾರೆ. ಇದ್ರೊಂದಿಗೆ ಸುಷ್ಮಿತಾ ಕಮ್​ಬ್ಯಾಕ್​ ಸಿನಿಮಾ ಯಾವುದು. ಸುಷ್ಮಿತಾ ಪಾತ್ರ ಹೇಗಿರಲಿದೆ. ಸಿನಿಮಾ ಯಾವ ಜಾನರ್​ಗೆ ಸೇರುತ್ತೇ ಅನ್ನೋ ಬಗ್ಗೆ ಬಾಲಿವುಡ್​ನಲ್ಲಿ ಚರ್ಚೆ ಆಗ್ತಿದೆ. 10 ವರ್ಷಗಳ ಬಳಿಕ ಮತ್ತೇ ಸಿನಿಮಾ ಮಾಡ್ತಿರೊದ್ರಿಂದ ಸುಷ್ಮಿತಾ ಸೆನ್​ ಕಮ್​ಬ್ಯಾಕ್​ ಚಿತ್ರದ ಮೆಲೆ ನಿರೀಕ್ಷೆ ಹೆಚ್ಚಿಸಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more